ಪಂಚೆ ಧರಿಸಿದ ಅಮಿತಾಬ್ ಬಚ್ಚನ್ : ತಮಿಳು ಸಿನಿಮಾಕ್ಕಾಗಿ ನ್ಯೂ ಗೆಟಪ್..

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ತಮಿಳು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಅಮಿತಾಬ್, ಸಿನಿಮಾದಲ್ಲಿ ನಟಿಸಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸಿನಿಮಾದ ಪಾತ್ರ ನಿಭಾಯಿಸಿದ ಎರಡು ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಬಿಗ್ ಬಿ ವಯಸ್ಸಾದಂತೆ ನಿಮ್ಮನ್ನ ಗುರುತಿಸುವವರ ಸಂಖ್ಯೆಯೂ ಸಹ ಕಡಿಮೆ ಆಗುತ್ತದೆ ಎಂದು ಬರೆದುಕೊಂಡಿದ್ದಾರೆ.

ತಮಿಳು ಸಿನಿಮಾಕ್ಕಾಗಿ ಅಮಿತಾಬ್ ಬಚ್ಚನ್ 40 ದಿನಗಳ ಕಾಲ್ ಶೀಟ್ ನೀಡಿದ್ದರು. ಅದರೆ ಅದಕ್ಕಿಂತ ಮುಂಚೆ ಬಚ್ಚನ್ ನಟನೆಯ ಭಾಗ ಭಾಗಶಃ ಮುಗಿಯುತ್ತಾ ಬಂದಿದೆ. ಸಿನಿಮಾದಲ್ಲಿ ಅಮಿತಾಬ್ ದ್ದಾರೆ. ಹಣೆಯ ತುಂಬ ವಿಭೂತಿ, ಅದರ ಮಧ್ಯೆ ಶ್ರೀಗಂಧವನ್ನು ಹಚ್ಚಿಕೊಂಡು ಸಾಂಪ್ರದಾಯಿಕ ತಮಿಳು ನಟನ ಹಾಗೆ ಕಂಡಿದ್ದಾರೆ.

ತಮಿಳುನಾಡಿನ ನಟ ಎಸ್.ಜೆ. ಸೂರ್ಯ ಸಹ ಅಮಿತಾಬ್ ಬಚ್ಚನ್ ಜೊತೆ ನಟನೆ ಮಾಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ನಾನು ತಮಿಳು ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಬರುವ ಮುಂಚೆ ಅಮಿತಾಬ್ ರ ಜೊತೆ ನಟಿಸುವ ಕನಸು ಕಂಡಿದ್ದೆ, ಅದು ಇಂದು ಕೈಗೂಡಿದೆ ಎಂದು ತಮ್ಮ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com