ಸ್ಯಾಂಡಲ್ ವುಡ್ ಆಟೋ ರಾಜ ಶಂಕರ್ ನಾಗ್, ಬಾಲಿವುಡ್ ಆಟೋ ರಾಣಿ ಇವರೇ..?

ಬಾಲಿವುಡ್ ಹಿರಿಯ ನಟಿ ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ಕೈ ಹಿಡಿದಿದ್ದಾಗಿದೆ. ಊರ್ಮಿಳಾ, ಮುಂಬೈ ಉತ್ತರ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಪ್ರಚಾರ ಶುರು ಮಾಡಿರುವ ಊರ್ಮಿಳಾ, ಭಾನುವಾರ ಆಟೋ ಚಾಲಕರ ಜೊತೆ ಕಾಣಿಸಿಕೊಂಡಿದ್ದಾರೆ.

ಕಾಂಗ್ರೆಸ್ ಕಚೇರಿಗೆ ಹೋಗುವ ಮೊದಲು ಊರ್ಮಿಳಾ, ಆಟೋ ಚಾಲಕರನ್ನು ಭೇಟಿಯಾಗಿ ಮಾತನಾಡಿದ್ರು. ಮತ ನೀಡುವಂತೆ ಮನವಿ ಮಾಡಿದ್ರು. ಆಟೋ ಚಾಲಕನ ಸೀಟಿನಲ್ಲಿ ಕುಳಿತಿದ್ದ ಊರ್ಮಿಳಾ ಫೋಟೋ ವೈರಲ್ ಆಗಿದೆ. ಊರ್ಮಿಳಾ, ಬಿಜೆಪಿಯ ಸಂಸದ ಗೋಪಾಲ್ ಶೆಟ್ಟಿ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ.

2014ರಲ್ಲಿ ಗೋಪಾಲ್, ಕಾಂಗ್ರೆಸ್ ನ ಸಂಜಯ್ ನಿರುಪಮ್ ಅವ್ರನ್ನು ಸೋಲಿಸಿದ್ದರು. ಈ ಬಾರಿ ಕಾಂಗ್ರೆಸ್, ಅಭ್ಯರ್ಥಿಯನ್ನು ಬದಲಿಸಿದೆ. ಕಾಂಗ್ರೆಸ್ ಸೇರ್ಪಡೆಯಾದ ಎರಡೇ ದಿನಗಳಲ್ಲಿ ಊರ್ಮಿಳಾಗೆ ಟಿಕೆಟ್ ನೀಡಿದೆ. ಈ ಹಿಂದೆ 2004ರಲ್ಲಿ ಬಾಲಿವುಡ್ ನಟ ಗೋವಿಂದಾ ಈ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. 2009ರಲ್ಲಿ ಅವ್ರು ಚುನಾವಣೆಗೆ ಸ್ಪರ್ಧಿಸಿರಲಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com