Small screen : ಪುನೀತ್ ರಾಜ್ ಕುಮಾರ್ ಕಂಬ್ಯಾಕ್, ಕನ್ನಡದ ಕೋಟ್ಯಾಧಿಪತಿಗೆ ಸಾರಥಿ ಅಪ್ಪು..

‘ಕನ್ನಡದ ಕೋಟ್ಯಾಧಿಪತಿ’ ಮತ್ತೆ ಶುರುವಾಗುತ್ತಿದೆ. 3 ಸೀಸನ್ ಮುಗಿಸಿರುವ ಈ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿತ್ತು. ಈಗ 4ನೇ ಸೀಸನ್‌ಗೆ ಸಜ್ಜಾಗಿದೆ ನಿಂತಿದೆ.

ಎರಡು ಸೀಸನ್‌ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡಿದ್ದರು. ಸೀಸನ್‌ 3 ಅನ್ನು ರಮೇಶ್ ಅರವಿಂದ್ ನಿರೂಪಣೆ ಮಾಡಿದ್ದರು.

ಇದೀಗ ನಾಲ್ಕನೇ ಸೀಸನ್‌ ಬರುತ್ತಿದ್ದು, ‘ಸೀಸನ್ 4’ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವುದಿಲ್ಲ. ಬದಲಿಗೆ, ಕಲರ್ಸ್ ಕನ್ನಡ ವಾಹಿನಿ ಪ್ರಸಾರವಾಗುತ್ತದೆ. ವಿಶೇಷವೆಂದರೆ, ಮತ್ತೆ ಪುನೀತ್ ರಾಜ್ ಕುಮಾರ್ ಸಾರಥ್ಯ ವಹಿಸಿಕೊಂಡಿರುವುದು.

ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡೋದು ಬಹುತೇಕ ಖಚಿತವಾಗಿದೆ. ಈಗಾಗಲೇ ಕೋಟ್ಯಧಿಪತಿಗಾಗಿ ಫೋಟೋಶೂಟ್ ಕೂಡ ಮಾಡಿಸಿದ್ದು, ಫೋಟೋ ಈಗ ವೈರಲ್ ಆಗಿದೆ. ಹೊಸ ಚಾನಲ್, ಹೊಸ ಆಯಂಕರ್ ಜೊತೆಗೆ ಬರುತ್ತಿರುವ ಈ ಶೋ ಸದ್ಯದಲ್ಲಿಯೇ ಶುರುವಾಗುತ್ತಿದ್ದು, ಸಾಕಷ್ಟು ಕುತೂಹಲ ಮೂಡಿಸುತ್ತಿದೆ.

ಸಂತೋಷ್ ಆನಂದ್ ರಾಮ್ ನಿರ್ದೇಶನದ ‘ಯುವರತ್ನ’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಿರುವ ಪುನೀತ್ ರಾಜ್ ಕುಮಾರ್ ಈಗ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಅದು ತಮ್ಮ ನೆಚ್ಚಿನ ಕಾರ್ಯಕ್ರಮ ಕೋಟ್ಯಧಿಪತಿ ಮೂಲಕ ವಾಪಸ್ ಆಗ್ತಿರುವುದು ಅಭಿಮಾನಿಗಳಿಗೆ ಫುಲ್ ಖುಷಿ ನೀಡಿದೆ.

ಗಾಗಲೇ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೊಸ ಚಾನಲ್, ಹೊಸ ಆಂಕರ್ ಜೊತೆ ಬರ್ತಿರುವ ಈ ಶೋ, ಯಾವತ್ತಿಂದ ಶುರುವಾಗಲಿದೆ ಎಂಬ ಬಗ್ಗೆ ಇನ್ನೂ ಸರಿಯಾದ ಮಾಹಿತಿಯಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com