IPL Hungama : ವಾರ್ನರ್ ಅಬ್ಬರ, ಸಂಜು ಶತಕ ವ್ಯರ್ಥ, ಹೈದರಾಬಾದಿಗೆ ಒಲಿದ ಜಯಲಕ್ಷ್ಮಿ..

ಸಂಜು ಸ್ಯಾಮ್ಸನ್ ಅವರ ಭರ್ಜರಿ ಶತಕದ ನಡುವೆಯೂ ಹೈದರಾಬಾದ್ತಂಡವೂ ಐಪಿಎಲ್‌ ಪಂದ್ಯದಲ್ಲಿ ರಾಜಾಸ್ಥಾನ ರಾಯ್ಲಸ್‌ ತಮಡವನ್ನು ಬಗ್ಗುಬಡಿದು ಜಯದ ನಗೆ ಬೀರಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ ರಾಯಲ್ಸ್ 2 ವಿಕೆಟ್ ನಷ್ಟಕ್ಕೆ 198 ರನ್ ಸಿಡಿಸಿತ್ತು. ಸಂಜು ಸಾಮ್ಸನ್ ಅಜೇಯ 102 ರನ್ ಸಿಡಿಸಿರೆ, ಅಜಿಂಕ್ಯ ರಹಾನೆ 70 ರನ್ ಬಾರಿಸಿದರು. ಈ ಮೂಲಕ ಹೈದರಾಬಾದಿಗೆ ಬೃಹತ್ ಟಾರ್ಗೆಟ್ ನೀಡಿತ್ತು.

ಗೆಲುವಿಗೆ 199 ರನ್ ಟಾರ್ಗೆಟ್ ಪಡೆದ ಸನ್ ರೈಸರ್ಸ್ ಹೈದರಾಬಾದದ್ ತಂಡವು ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಜಯದ ಪುಸ್ತಕದಲ್ಲಿ ಸಹಿ ಮಾಡಿತು.

ಹೈದರಾಬಾದಿನ ಈ ಜಯದಲ್ಲಿ ಆರಂಭಿಕರಾದ ಡೇವಿಡ್ ವಾರ್ನರ್‍, ಬೇರ್‌ಸ್ಟೋ ಹಾಗೂ ವಿಜಯ್‌ಶಂಕರ್‌ ಅವರುಗಳು ಪ್ರಮುಖ ಪಾತ್ರ ವಹಿಸಿದರು.

ವಾರ್ನರ್(69) ಬೇರ್‌ಸ್ಟೋ (45) ಮೊದಲ ವಿಕೆಟ್‌ಗೆ 110 ರನ್‌ಗಳ ಜೊತೆಯಾಟ ನೀಡಿದರು. ನಂತರ ಬಂದ ವಿಜಯಶಂಕರ್ (35) ಭರ್ಜರಿ ಆಟವಾಡಿದರು. ಒಂದು ಹಂತದಲ್ಲಿ ಹೈದರಾಬಾದ್ ತಂಡದ ಮೂರು ವಿಕೆಟ್ ದಿಢೀರ್ ಪತನವಾದವು.

ಆದ್ರೆ ಕೊನೆಯಲ್ಲಿ ಸವ್ಯಸಾಚಿ ಯೂಸುಫ್ ಪಠಾಣ್ (16) ಹಾಗೂ ರಶೀದ್ ಖಾನ್ (15 ) ಹೈದರಾಬಾದ್‌ನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದರು. ಇನ್ನೂ ಒಂದು ಓವರ್‍ ಬಾಕಿ ಇರುವಂತೆಯೇ ಆತಿಥೇಯ ತಂಡ ಗೆಲುವು ಸಾಧಿಸಿತು.

ರಾಜಸ್ಥಾನ ಪರ ಕರ್ನಾಟಕದ ಶ್ರೇಯಸ್ ಗೋಪಾಲ್ ಮೂರು ವಿಕೆಟ್ ಉರುಳಿಸಿ ತಮ್ಮ ಚಾಕಚಕ್ಯತೆ ಮೆರೆದರಾದರು, ಉಳಿದ ದಾಳಿಕಾರರು ಬೆಂಬಲ ನೀಡಲಿಲ್ಲ.

ಇದಕ್ಕೂ ಮೊದಲು ರಾಜಸ್ಥಾನ ರಾಯಲ್ಸ್ ತಂಡ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 198 ರನ್‌ಗಳ ಬೃಹತ್ ಮೊತ್ತ ಗಳಿಸಿತ್ತು.

ಸರದಿ ಆರಂಭಿಸಿದ ಅಜಿಂಕ್ಯಾ ರಹಾನೆ (70) ರನ್ ಗಳಿಸಿದರೆ, ಸಂಜು ಸ್ಯಾಮ್ಸನ್ (ಅಜೇಯ 102) ಶತಕ ಗಳಿಸಿ ರಾಜಸ್ಥಾನಕ್ಕೆ ಚೇತರಿಕೆ ನೀಡಿದರು.

ರಾಜಾಸ್ಥಾನದ ಸರದಿ ರಹಾನೆ ಹಾಗೂ ಸಂಜು ಅವರ ಆವನ್ನೇ ಅವಲಂಬಿಸಿತ್ತು. ಸಂಜು 55 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರುಗಳ ನೆರವಿನೊಂದಿಗೆ ಶತಕ ದಾಖಲಿಸಿದರೆ, ರಹಾನೆ 49 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಒಳಗೊಂಡ 70 ರನ್ ಸಿಡಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com