ಡಯಟ್ ಗೆ ನಿಂಬೆ, ಗ್ರೀನ್ ಟೀ ಉಪಯೋಗ ಅದೆಷ್ಟು ಲಾಭದಾಯಕ ನೋಡಿ..

ಒಮ್ಮೆ ತೂಕ ಹೆಚ್ಚಾದ್ರೆ ಕಡಿಮೆ ಮಾಡಿಕೊಳ್ಳೋದು ಸುಲಭದ ಮಾತಲ್ಲ. ಬೊಜ್ಜು ಕಡಿಮೆ ಮಾಡಲು ಜನರು ಸಾಕಷ್ಟು ಕಸರತ್ತುಗಳನ್ನು ಮಾಡ್ತಾರೆ. ವ್ಯಾಯಾಮ, ಜಿಮ್, ವಾಕಿಂಗ್, ಜಾಗಿಂಗ್ ಹೀಗೆ ಅನೇಕ ವಿಧಾನಗಳನ್ನು ಅನುಸರಿಸುತ್ತಾರೆ.

ಆದ್ರೆ ಇವುಗಳ ಜೊತೆ ಡಯಟ್ ಮತ್ತು ಜೀವನ ಶೈಲಿ ಕೂಡ ನಮ್ಮ ತೂಕದ ಮೇಲೆ ಪ್ರಭಾವ ಬೀರುತ್ತದೆ. ಕೆಲವೊಂದು ಒಳ್ಳೆ ಅಭ್ಯಾಸಗಳು ತೂಕ ಇಳಿಸಲು ನೆರವಾಗುವ ಜೊತೆಗೆ ಆರೋಗ್ಯ ಕಾಪಾಡುತ್ತವೆ.

ನೀರು ತೂಕವನ್ನು ಸಮತೋಲನದಲ್ಲಿಡುತ್ತದೆ. ತೂಕ ಕಡಿಮೆ ಮಾಡಲು ನೀರು ಬೆಸ್ಟ್. ಅನೇಕ ಸಂಶೋಧನೆಗಳಲ್ಲೂ ಇದು ಸಾಬೀತಾಗಿದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಅಥವಾ ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದಕ್ಕೆ ಗ್ರೀನ್ ಟೀ ರಸ ಹಾಕಿ ಕುಡಿದ್ರೆ ಮತ್ತಷ್ಟು ಲಾಭವಾಗಲಿದೆ.

ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು. ಇದು ವೇಗವಾಗಿ ತೂಕ ಇಳಿಸಿಕೊಳ್ಳಲು ನೆರವಾಗುವ ಜೊತೆಗೆ ಆಹಾರ ವೇಗವಾಗಿ ಜೀರ್ಣವಾಗಲು ನೆರವಾಗುತ್ತದೆ. ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮೊದಲು ಗ್ರೀನ್ ಟೀ ಸೇವನೆ ಮಾಡಿದ್ರೆ ನಿಮ್ಮ ತೂಕ ಬೇಗ ಇಳಿಯುತ್ತದೆ.

ಹಸಿರು ತರಕಾರಿಗಳಿಂದ ಸಾಕಷ್ಟು ಪ್ರಯೋಜನಗಳಿವೆ. ಹಾಗಾಗಿ ನಿಮ್ಮ ಡಯೆಟ್ ನಲ್ಲಿ ಇದು ಅತ್ಯಗತ್ಯವಾಗಿರಲಿ. ದೇಹಕ್ಕೆ ಪೋಷಕಾಂಶ ಸಿಗುವ ಜೊತೆಗೆ ಕೊಬ್ಬಿನಾಂಶವನ್ನು ಹೊರ ಹಾಕುತ್ತದೆ. ತರಕಾರಿ ಸೇವನೆ ವೇಳೆ ಹೆಚ್ಚು ಮಸಾಲೆ ಬಳಸಬೇಡಿ. ಎಲೆಕೋಸು, ಹೂಕೋಸು, ಪಪ್ಪಾಯಿ ಕಾಯಿಯನ್ನು ನೀವು ಬೇಯಿಸಿ ತಿನ್ನಬಹುದು.

ಸೂಪ್ ಗಳು ಕೂಡ ನಿಮ್ಮ ತೂಕ ಇಳಿಸಲು ನೆರವಾಗುತ್ತವೆ ಇದು ಹಸಿವನ್ನು ಕಡಿಮೆ ಮಾಡಿ ಕೊಬ್ಬು ಹೆಚ್ಚಾಗದಂತೆ ತಡೆಯುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com