ಎಸ್‍ಡಿಎಂಸಿಎ 19ನೇ ಕ್ರಿಕೆಟ್ ಶಿಬಿರ : ‘ಆಟದಲ್ಲಿ ಏಕಾಗ್ರತೆ, ಸಕಾರತ್ಮಕ ಭಾವನೆ ಮುಖ್ಯ’ ಮಹ್ಮದ ಅತ್ತಾರ

ಆಟದಲ್ಲಿ ಏಕಾಗ್ರತೆ, ಸಕಾರತ್ಮಕ ಭಾವನೆ ಅತಿ ಮುಖ್ಯ ಎಂದು ಹಿರಿಯ ಕ್ರಿಕೆಟ್ ಆಟಗಾರ ಮಹ್ಮದ ಅತ್ತಾರ ಹೇಳಿದರು.

ಇಲ್ಲಿಯ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಮೈದಾನದಲ್ಲಿ ಸೋಮವಾರ ಆರಂಭವಾದ ಎಸ್‍ಡಿಎಂಸಿಎ 19ನೇ ಬೇಸಿಗೆ ಕ್ರಿಕೆಟ್ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಆಟ ಆಡುವಾಗ ಮಿಲ್ಕ (ಒIಐಏ) ಇದರರ್ಥ ತಿಳಿಸು ಆಡಬೇಕು. ಎಂ ಅಂದರೆ ಮನಿ (ಹಣ), ಐ ಎಂದರೆ ಇನ್‍ಫುಲೆನ್ಸ್ (ವಸೂಲಿ), ಎಲ್ ಅಂದರೆ ಲಕ್, ಕೆ ಅಂದರೆ ನಾಲೇಜ್ ಇದರ ಮಿತ್ರನಾಗಿ ಆಡಬೇಕು. ಕ್ರೀಡಾಪಟುಗಳು ದುಶ್ಚಟಗಳಿಂದ ದೂರವಿರಬೇಕು. ಆಟದಲ್ಲಿ ಸೋಲು ಗೆಲುವಿಗಿಂತ ಆಟವನ್ನು ಸಂತೋಷದಿಂದ ಆಡುವುದನ್ನು ಕಲಿಯಬೇಕು. ಬೇರೆಯವರ ಬಗ್ಗೆ ಹೀಯಾಳಿಕೆ, ಬಯ್ಯುವುದಕ್ಕಿಂತ ಕ್ರೀಡಾಭಾವದ ಆಟ ಮುಖ್ಯವಾಗುವುದು ಎಂದು ಹೇಳಿದರು.

ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಬಿ.ವಣಕುದರಿ ಮಾತನಾಡಿ, ತಂದೆ ತಾಯಿ ಪ್ರೋತ್ಸಾಹದಿಂದ ನಿಮ್ಮನ್ನು ಇಲ್ಲಿ ತರಬೇತಿಗೆ ಕಳಿಸುತ್ತಾರೆ. ಅದರಿಂದ ನೀವು ಶ್ರದ್ಧೆಯಿಂದ ತರಬೇತಿಯಲ್ಲಿ ಪಾಲ್ಗೊಂಡು ಉತ್ತಮ ಆಟಗಾರರಾಗಿ ಹೊರಹೊಮ್ಮಿ ಎಂದು ಕಿವಿಮಾತು ಹೇಳಿದರು.
ಈ ಅಕಾಡೆಮಿಯಿಂದ ತರಬೇತಿ ಪಡೆದ ಉತ್ತಮ ಆಟಗಾರರು ತಮ್ಮ ತಾಂತ್ರಿಕ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ತಮ್ಮ ಕಾಲೇಜಿನಲ್ಲಿ ಕ್ರೀಡಾ ಮಿಸಲಾತಿ ನೀಡಲಾಗುತ್ತದೆ ಎಂದು ತಿಳಿಸಿದರು.

ತರಬೇತುದಾರ ರತನ ಗೋವರ ಮಾತನಾಡಿ, ಆಟಗಾರರು ತರಬೇತಿ ನೀಡುವ ತರಬೇತುದಾರರನ್ನು ಗುರುಗಳಿಗೆ ನೀಡುವ ಎಲ್ಲ ಗೌರವ ನೀಡಬೇಕು. ಅವರು ಶಿಸ್ತಿಗಾಗಿ ಬೈಯ್ದಾಗ ಸಿಟ್ಟಾಗದೆ ಸಕಾರತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಎಸ್‍ಡಿಎಂಸಿಎ ಕಾರ್ಯದರ್ಶಿ ಭಗವಾನ ಶಾಬಾದಿ ಪ್ರಾಸ್ತಾವಿಕವಾಗಿ ಮಾತನಾಡಿ ಅಕಾಡೆಮಿ ನಡೆದು ಬಂದ ದಾರಿಯನ್ನು ವಿವರಿಸಿದರು.
ತರಬೇತುದಾರರಾದ ರಾಜು ಕಲಾಲ, ಧೀರಜ್ ಶಾಬಾದಿ, ಶಿವಾಜಿ ವಡ್ಡರ, ಹಬೀಬ ತಾಡಪತ್ರಿ, ಮಲ್ಲಿಕ್, ಕಾಸೀಮ್, ಹರ್ಮಾನ್ ಪ್ರೀತ್ ಇದ್ದರು.
ಇಮ್ರಾನ್‍ಖಾನ್ ಕಾರ್ಯಕ್ರಮ ನಿರೂಪಿಸಿದರು. ಶಿವಾಜಿ ವಡ್ಡರ್ ವಂದಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com