ಫಿಟ್ ಆಗಿರಲು ಸಾನಿಯಾ ಪ್ರತಿ ದಿನ ನಾಲ್ಕು ಗಂಟೆ ಜಿಮ್ ನಲ್ಲಿ ಕಸರತ್ತು..!

ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಕೆಲ ತಿಂಗಳ ಹಿಂದಷ್ಟೆ ಸಾನಿಯಾ ಮಿರ್ಜಾ ಮಗುವಿಗೆ ಜನ್ಮ ನೀಡಿದ್ದಾರೆ. ಎಲ್ಲ ಮಹಿಳೆಯರಂತೆ ಗರ್ಭಧಾರಣೆ ವೇಳೆ ಸಾನಿಯಾ ಮಿರ್ಜಾ ತೂಕ ಹೆಚ್ಚಾಗಿತ್ತು.

ಹೆರಿಗೆ ನಂತ್ರ ಬೆವರಿಳಿಸಿದ ಸಾನಿಯಾ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ. ಐದು ತಿಂಗಳಲ್ಲಿ 22 ಕೆ.ಜಿ ತೂಕ ಇಳಿಸಿ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ.

ಹೆರಿಗೆ ನಂತ್ರ ಇಷ್ಟು ಕಡಿಮೆ ಸಮಯದಲ್ಲಿ 22 ಕೆ.ಜಿ ತೂಕ ಇಳಿಸುವುದು ಸುಲಭವಾಗಿರಲಿಲ್ಲ. ಮತ್ತೆ ಮೈದಾನಕ್ಕಿಳಿಯುವ ಗುರಿ ಹಾಗೂ ಫಿಟ್ನೆಸ್ ಕಾಪಾಡಿಕೊಳ್ಳಲು ಸಾನಿಯಾ ಮಿರ್ಜಾ ಸತತ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದಾರೆ. ಉಳಿದ ಮಹಿಳೆಯರಿಗೆ ಸಾನಿಯಾ ಮಾದರಿಯಾಗಿದ್ದಾರೆ.

ಗರ್ಭಿಣಿಯಾಗಿದ್ದಾಗ ಸಾನಿಯಾ ತೂಕ 89 ಕೆ.ಜಿಯಾಗಿತ್ತು. ಹೆರಿಗೆಯಾದ 15 ದಿನಗಳಲ್ಲಿಯೇ ಸಾನಿಯಾ ವ್ಯಾಯಾಮ ಶುರು ಮಾಡಿದ್ದರು. ಹಾಗಾಗಿ ಐದು ತಿಂಗಳಲ್ಲಿ 89 ಕೆ.ಜಿಯಿದ್ದ ತೂಕವನ್ನು 67 ಕ್ಕೆ ಇಳಿಸಿಕೊಂಡಿದ್ದಾರೆ. ಫಿಟ್ ಆಗಿರಲು ಸಾನಿಯಾ ಪ್ರತಿ ದಿನ ನಾಲ್ಕು ಗಂಟೆ ಜಿಮ್ ನಲ್ಲಿ ಬೆವರಿಳಿಸುತ್ತಾರೆ. 100 ನಿಮಿಷದವರೆಗೆ ಕಾರ್ಡಿಯೋ ಮಾಡುವ ಸಾನಿಯಾ ಒಂದು ಗಂಟೆ ಕಿಕ್ ಬಾಕ್ಸಿಂಗ್ ಮತ್ತು 1 ಗಂಟೆ ಪಿಲೇಟ್ಸ್ ಮಾಡ್ತಾರೆ.

ಯೋಗ ಕೂಡ ಸಾನಿಯಾ ಮಿರ್ಜಾ ವರ್ಕ್ಔಟ್ ನ ಒಂದು ಭಾಗ. ನಿಯಮಿತವಾಗಿ ವ್ಯಾಯಾಮ, ಯೋಗ ಮಾಡುವುದ್ರಿಂದ ಫಿಟ್ ಆಗಿದ್ದೇನೆಂದು ಸಾನಿಯಾ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com