ಚೀನಾ ಕಪ್ ಫುಟ್ಬಾಲ್ ಟೂರ್ನಿ : ಥಾಯ್ಲೆಂಡ್ ಮಣಿಸಿ ಪ್ರಶಸ್ತಿ ಎತ್ತಿ ಸಂಭ್ರಮಿಸಿದ ಉರುಗ್ವೆ

ಚೀನಾ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಉರುಗ್ವೆ 4-0ಯಿಂದ ಥಾಯ್ಲೆಂಡ್ ತಂಡವನ್ನು ಫೈನಲ್ ಪಂದ್ಯದಲ್ಲಿ ಮಣಿಸಿ ಪ್ರಶಸ್ತಿ ಎತ್ತಿ ಸಂಭ್ರಮಿಸಿದೆ.

ಸೋಮವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಉರುಗ್ವೆ ಪರ ವೆಸಿನಾ (6ನೇ ನಿಮಿಷ), ಪೆರೆಒ (38ನೇ ನಿಮಿಷ), ಸ್ಟುವಾನಿ (58ನೇ ನಿಮಿಷ), ಗೊಮೆಜ್ (88ನೇ ನಿಮಿಷ) ಗೋಲು ಬಾರಿಸಿ ಮಿಂಚಿದರು. ಈ ಮೂಲಕ ಉರುಗ್ವೆ ತಂಡ ಚೀನಾ ಕಪ್ ಎತ್ತಿ ಸಂಭ್ರಮಿಸಿತು.

ಪಂದ್ಯದ ಮೊದಲಾವಧಿಯಿಂದಲೂ ಅಬ್ಬರದ ಆಟ ಪ್ರದರ್ಶಿಸಿದ ಉರುಗ್ವೆ ತಂಡ ಆರನೇ ನಿಮಿಷದಲ್ಲೇ ಗೋಲು ಬಾರಿಸಿ ಮಿಂಚಿತು. ಈ ಅವಧಿಯಲ್ಲಿ ಮತ್ತೊಂದು ಗೋಲು ಬಾರಿಸಿ ಅಂತರವನ್ನು ಹಿಗ್ಗಿಸಿತು.

ಮೊದಲಾವಧಿಯಲ್ಲಿ 2-0 ಯಿಂದ ಹಿನ್ನಡೆ ಅನುಭವಿಸಿದ್ದ ಥಾಯ್ಲೆಂಡ್ ಒತ್ತಡವನ್ನು ಮೆಟ್ಟಿನಿಲ್ಲುವ ಪ್ಲಾನ್ ಮಾಡಿಕೊಂಡಿತು. ಆದರೆ ಹಾಕಿಕೊಂಡ ಯೋಜನೆಯಂತೆ ಆಟ ಆಡಲಿಲ್ಲ. ಅಲ್ಲದೆ ಎದುರಾಳಿ ತಂಡಕ್ಕೆ ಮೂರು ಗೋಲು ನೀಡಿ ಕೈ ಸುಟ್ಟುಕೊಂಡಿತು. ಉರುಗ್ವೆ ಚೀನಾ ಕಪ್ ಗೆದ್ದ ಬೀಗಿತು.

Leave a Reply

Your email address will not be published.

Social Media Auto Publish Powered By : XYZScripts.com