ವಿದೇಶದಲ್ಲಿಯೂ ಸದ್ದು ಮಾಡಿದ “ಡೋಲಾರೆ” ಹಾಡಿಗೆ ನೈಜೀರಿಯಾ ಯುವಕನ ಸ್ಟೆಪ್

ಬಾಲಿವುಡ್‌ನ ಬ್ಲಾಕ್‌ ಬಸ್ಟರ್‌ ಚಿತ್ರ ‘ದೇವದಾಸ್’ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ಹಾಗೂ ಐಶ್ವರ್ಯಾ ರೈ ಸೇರಿ ಕುಣಿದಿರುವ “ಡೋಲಾರೆ” ಹಾಡು ಈಗ ಕೇಳಿದರೂ ಹೆಜ್ಜೆ ಹಾಕಬೇಕು ಎನಿಸುತ್ತದೆ. ಒಂದು ಕಾಲದಲ್ಲಿ ಈ ಸ್ಟೆಪ್‌ಗಳು ಮಕ್ಕಳಿಂದ ಮುದುಕರವರೆಗೆ ಸೆಳೆದಿದ್ದಂತು ಸುಳ್ಳಲ್ಲ. ಈಗ ಟಿಕ್ ಟಾಕ್ನಲ್ಲಿಯೂ ಈ ಹಾಡು ಮತ್ತೆ ಸುದ್ದಿಯಲ್ಲಿದೆ.

ಭಾರತದಲ್ಲಿ ಮಾತ್ರವಲ್ಲದೇ ಈ ಹಾಡು ಇದೀಗ ವಿದೇಶದಲ್ಲಿಯೂ ಸದ್ದು ಮಾಡುತ್ತಿದ್ದು, ನೈಜೀರಿಯಾದ ಯುವಕರಿಬ್ಬರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹಾಡು ಅರ್ಥವಾಗದಿದ್ದರೂ, ತಮ್ಮದೇ ಆದ ವಿಚಿತ್ರ ಸ್ಟೆಪ್ಸ್ ಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಶಾ ಮಿಯಾಹ ಎನ್ನುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈಗ ಈ ವಿಡಿಯೋ ವೈರಲ್ ಆಗಿದೆ.

ನೈಜೀರಿಯಾ ಯುವಕರ ಈ ಸ್ಟೆಪ್‌ ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಂತೆ ನೆಟ್ಟಿಗರು ಫಿದಾ ಆಗಿದ್ದು, ನೈಜೀರಿಯಾ ಹಾಗೂ ಭಾರತದ ನಡುವೆ ಸಾಂಸ್ಕೃತಿಕವಾಗಿ ಕಂದರವಿದ್ದರೂ ಸಂಗೀತ ಹಾಗೂ ಕುಣಿತದ ಮೂಲಕ ಈ ಬೆಸುಗೆ ಬೆಳೆದಿದೆ. ಇದಕ್ಕೆ ಮಾಧುರಿ ದೀಕ್ಷಿತ್-ಐಶ್ವರ್ಯಾ ರೈ ಹೇಗೆ ಪ್ರತಿಕ್ರಿಯಿಸುತ್ತಾರೋ ನೋಡಬೇಕು ಎನ್ನುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com