ಧಾರವಾಡ : ನಾಳೆಯಿಂದ ರಾಷ್ಟ್ರಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ

ಪ್ರತಿವರ್ಷದಂತೆ ಇಲ್ಲಿನ ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯವು ಈ ವರ್ಷವು ಇನ್ಸಿಗ್ನಿಯಾ-2019 ಉತ್ಸವವನ್ನು ಮಾ.22 ರಿಂದ 24 ವರೆಗೆ ಹಮ್ಮಿಕೊಂಡಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ.ವಣಕುದುರೆ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ಸಿಗ್ನಿಯಾದ 8ನೇಯ ಆವೃತ್ತಿಯಲ್ಲಿ ರಾಷ್ಟ್ರದ ವಿವಿಧ ಭಾಗಗಳ ಸುಮಾರು2 ಸಾವಿರ ವಿದ್ಯಾರ್ಥಿಗಳು 60 ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಮುಖವಾಗಿ ರಸಪ್ರಶ್ನೆ, ಪ್ರಬಂಧ ಮಂಡನೆ, ರೋಬೋಟಿಕ್ಸ ಮುಂತಾದ ತಾಂತ್ರಿಕ ಸ್ಪರ್ಧೆಗಳು ಮತ್ತು ಸಂಗೀತ, ನೃತ್ಯ, ನಾಟಕ ಹಾಗೂ ಲಲಿತ ಕಲೆಗಳಂತಹ ಸಾಂಸ್ಕ್ರತಿಕ ಸ್ಪರ್ಧೆಗಳು ಜರುಗಲಿವೆ.

ಇನ್ನೊಂದು ಮಹತ್ವದ ಆಕರ್ಷಣೆಯೆಂದರೆ ಮಹಾತ್ಮಾ ಗಾಂಧೀಜಿಯವರ 150ನೇ ಹುಟ್ಟು ಹಬ್ಬದ ಆಚರಣೆಯ ಅಂಗವಾಗಿ ಪ್ರಾಕೃತಿಕ ಸಂಪನೂಲ್ಮಗಳ ಸಂರಕ್ಷಣೆಗಾಗಿ ನೇಚರ್ ಫಸ್ಟ್‍ನ ಪಿ.ವಿ.ಹಿರೇಮಠ ಅವರ ಮಾರ್ಗದರ್ಶನದಲ್ಲಿ ಇಕೊಮೆನಿಯಾ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ.
ಜೊತೆಗೆ ಸಾಮಾಜಿಕ ಕಳಕಳಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರವನ್ನು ಎಸ್.ಡಿ.ಎಮ್.ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.

ಉತ್ಸವದ ಪ್ರಮುಖ ಆಕರ್ಷಣೆಯಾಗಿ ಬಾಲಿವುಡ್ ಹಾಡುಗಾರ ಅರ್ಜುನ ಕನುನಗೊ ಹಾಗೂ ಅವರ ತಂಡವು ಸಂಗೀತದ ರಸದೌತಣ ಉಣಬಡಿಸಲಿದೆ.
ಉತ್ಸವವನ್ನು ದಿ.22 ರಂದು ಸಂಜೆ 5.30 ಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ ಉದ್ಘಾಠಿಸುವರು. ಅತಿಥಿಯಾಗಿ ವಿಶ್ರಾಂತ ವಿಂಗ್ ಕಮಾಂಡರ ಈಶ್ವರ ಕೊಡೊಳ್ಳಿ ಆಗಮಿಸಲಿದ್ದಾರೆ. ಎಸ್.ಡಿ.ಎಮ್.ಇ. ಸೊಸೈಟಿ ಕಾರ್ಯದರ್ಶಿ ಜೀವಂಧರ್‍ಕುಮಾರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

24 ರಂದು ರಾತ್ರಿ ಸಂಜೆ 8 ಗಂಟೆಗೆ ಎಸ.ಡಿ.ಎಮ್ ಉಜರೆ ಮಹಾವಿದ್ಯಾಲಯದ ಕಲಾವೈಭವ ತಂಡದಿಂದ ವಿಶೇಷ ಕಾರ್ಯಕ್ರಮವು ಶ್ರೀ.ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಜರುಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಡೀನ್ ಡಾ.ಕೆ.ಗೋಪಿನಾಥ, ಪ್ರೊ.ಪಿ.ಕೆ.ಪರ್ವತಿ, ಎಂ.ಬಿ.ದೊಡ್ಡಮನಿ ಮತ್ತಿತರರು ಇದ್ದರು.

Leave a Reply

Your email address will not be published.

Social Media Auto Publish Powered By : XYZScripts.com