‘ಕನ್ನಡ ಚಿತ್ರರಂಗದ ನಟರು ಗೌರವದಿಂದ ಮನೆಯಲ್ಲಿ ಇರಬೇಕು’- ಶಾಸಕ ನಾರಾಯಣಗೌಡ

ಕನ್ನಡ ಚಿತ್ರರಂಗದ ನಟರು ಗೌರವದಿಂದ ಮನೆಯಲ್ಲಿ ಇರಬೇಕು. ಪ್ರಚಾರಕ್ಕೆ ಬಂದು ಜೆಡಿಎಸ್ ಪಕ್ಷ ಹಾಗೂ ನಾಯಕರ ವಿರುದ್ಧ ಬಾಯಿಬಿಟ್ಟರೆ ಪರಿಣಾಮ ಸರಿ ಇರುವುದಿಲ್ಲ ಎಂದು ಕೆ.ಆರ್. ಪೇಟೆ ಶಾಸಕ ನಾರಾಯಣಗೌಡ ಹೇಳಿದ್ದಾರೆ.

ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದರ್ಶನ್ ಮತ್ತು ಯಶ್ ಅವರು ಒಬ್ಬ ವ್ಯಕ್ತಿಯ ಪರ ಪ್ರಚಾರ ನಡೆಸುವುದು ಸರಿಯಲ್ಲ. ರಾಜಕೀಯಕ್ಕೂ ಅವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.

ನಾವು ಟಿಕೆಟ್ ಗೆ ಕೊಟ್ಟ ಹಣದಲ್ಲಿ ಅವರು ಜೀವನ ನಡೆಸುತ್ತಿದ್ದಾರೆ. ಗೌರವದಿಂದ ಇರುವುದನ್ನು ಬಿಟ್ಟು, ನಮ್ಮ ಪಕ್ಷದ ಮತ್ತು ನಾಯಕರ ಬಗ್ಗೆ ರಾಜಕಾರಣ ಮಾತನಾಡಿದರೆ ಸುಮ್ಮನಿರುವುದಿಲ್ಲ. ನಮ್ಮ ಪಕ್ಷ ಅಧಿಕಾರದಲ್ಲಿದ್ದು, ನಿಮ್ಮ ಅಕ್ರಮಗಳ ಜಾತಕ ಹೊರ ತರಬೇಕಾಗುತ್ತದೆ. ನಮ್ಮ ಪಕ್ಷದ ಮುಖಂಡರ ಬಗ್ಗೆ ಲಘುವಾಗಿ ಮಾತನಾಡಿದರೆ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com