ಗೋವಾವನ್ನು ಮಣಿಸಿ ಇಂಡಿಯನ್ ಸೂಪರ್‍ ಲೀಗ್ ಗೆದ್ದ ಬೆಂಗಳೂರು ತಂಡ

ದೇಶದ ಫುಟ್ಬಾಲ್ ಕಣಜ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ ಇದೇ ಪ್ರತಿಷ್ಠಿತ ಇಂಡಿಯನ್ ಸೂಪರ್‍ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಮುಂಬೈನ ಫುಟ್ಬಾಲ್ ಎರೀನಾದಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಸುನಿಲ್ ಛೆಟ್ರಿ ನೇತೃತ್ವದ ಬಿಎಫ್‌ಸಿಯು ಗೋವಾ ಫುಟ್ಬಾಲ್ ಕ್ಲಬ್ ತಂಡವನ್ನು ಮಣಿಸಿ ತನ್ನ ೆರಡನೇ ಪ್ರಯತ್ನದಲ್ಲಿಯೇ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.

ಜಿದ್ದಾಜಿದ್ದಿನಿಂದ ಕುಡಿದ್ದ ಪಂದ್ಯದ ಹೆಚ್ಚುವರಿ ಸಮಯದಲ್ಲಿ ಬೆಂಗಳೂರು ತಂಡ ಗೋಲು ಗಳಿಸುವ ಮೂಲಕ ಜಯಭೇರಿ ಬಾರಿಸಿತಲ್ಲದೇ ತವರಿನ ಪ್ರೇಕ್ಷಕರ ಮದೋಲ್ಲಾಸಕ್ಕೆ ಹೊಸ ಭಾಷ್ಯ ಬರೆಯಿತು.

ರೋಚಕ 90 ನಿಮಿಷಗಳ ಹೋರಾಟದಲ್ಲಿ ಯಾವುದೇ ಗೋಲು ದಾಖಲಾಗಿರಲಿಲ್ಲ. ಹೀಗಾಗಿ ಹೆಚ್ಚುವರಿ ಸಮಯ ನೀಡಲಾಯಿತು.

ಈ ಹೆಚ್ಚುವರಿ ಸಮಯದ 26ನೇ ನಿಮಿಷ, ಅಂದರೆ ಪಂದ್ಯದ 116ನೇ ನಿಮಿಷದಲ್ಲಿ ಬೆಂಗಳೂರು ತಂಡದ ರಾಹುಲ್ ಭಿಕೆ ಅದ್ಬುತ ಗೋಲು ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಪ್ರಥಮ ಅವಧಿ ಗೋಲಿಲ್ಲದೆ ಅಂತ್ಯಗೊಂಡಿತು. ದ್ವಿತಿಯಾರ್ಧ ಮತ್ತಷ್ಟು ಕುತೂಹಲಕ್ಕೆ ಕಾರಣವಾಯಿತು. ಹಳದಿ ಕಾರ್ಡ್‌ಗಳು ಮೇಳೈಸಿದವು. ಗೋಲಿಗಾಗಿ ಹೋರಾಟ ತೀವ್ರಗೊಂಡಿತು. ಆದರೆ ದ್ವಿತಿಯಾರ್ಧವೂ ಗೋಲಿಲ್ಲದೆ ಅಂತ್ಯಗೊಂಡಿತು.

ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಹೆಚ್ಚು ಅಂಕಗಳನ್ನು ಸಂಪಾದಿಸಿ ಅಗ್ರ ಸ್ಥಾನದಲ್ಲಿದ್ದ ಬಿಎಫ್‍ಸಿ ತಂಡವು ಪ್ರಶಸ್ತಿಯನ್ನು ತನ್ನದಾಗಿಸಿಕೊಮಡಿತು. ಇದರೊಂದಿಗೆ ಐಎಸ್ ಎಲ್ ಇತಿಹಾಸದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಪ್ರಶಸ್ತಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ತಂಡವು ಪಾತ್ರವಾಯಿತು.

Leave a Reply

Your email address will not be published.

Social Media Auto Publish Powered By : XYZScripts.com