ಈ ದೇಶದ ಚೌಕಿದಾರ ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೆ ಸಿದ್ಧ

ನಾನು ಈ ದೇಶದ ಚೌಕಿದಾರ(ಸೇವಕ) ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಟೀಕಿಸುವುದಕ್ಕೆ ವಿಪಕ್ಷಗಳಿಗೆ ಅದೆಷ್ಟು ಕಚ್ಚಾ ವಸ್ತುಗಳನ್ನು ನೀಡಿತ್ತು ಎಂಬುದು ಬೇರೆ ಮಾತು… ಚೌಕಿದಾರ್ ಚೋರ್ ಹೈ ಎಂದಿದ್ದ ರಾಹುಲ್ ಗಾಂಧಿ ಅವರ ಮಾತನ್ನಾಗಲೀ, ವಿಪಕ್ಷದ ಇನ್ಯಾರದೇ ಮಾತನ್ನಾಗಲೀ ಮೋದಿ ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಾಗಿ ‘ಚೌಕಿದಾರ’ ಎಂದು ಟೀಕಿಸುತ್ತ ಎಸೆದ ಕಲ್ಲನ್ನೇ ಎತ್ತಿಟ್ಟುಕೊಂಡು ಗೆಲುವಿನ ಮೆಟ್ಟಿಲು ನಿರ್ಮಿಸಲು ಹೊರಟಿದ್ದಾರೆ ಮೋದಿ. ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರಕ್ಕೆ ಟ್ವಿಟ್ಟರ್ ನಲ್ಲಿ ಅಧಿಕೃತ ಆಂದೋಲನ ಆರಂಭವಾಗಿದೆ. ‘ಮೋದಿ ಮತ್ತೊಮ್ಮೆ’ ಎಂಬುವವರೆಲ್ಲ ‘ಮೇ ಭೀ ಚೌಕಿದಾರ್ ಹೂಂ’ ಎಂದರೆ ಸಾಕು! ಹೌದು, ಮೇ ಬೀ ಚೌಕಿದಾರ್ ಹ್ಯಾಶ್ ಟ್ಯಾಗ್ ಮೂಲಕ ಮೋದಿ ಟ್ವೀಟ್ ಮಾಡಿದ್ದು, ಮೋದಿ ಅಭಿಮಾನಿಗಳೆಲ್ಲ ಆ ಹ್ಯಾಶ್ ಟ್ಯಾಗ್ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ ಅವರು ಈ ಟ್ವೀಟ್ ಮಾಡಿದ ಒಂದು ಗಂಟೆಯೊಳಗಾಗಿ ಸರಿ ಸುಮಾರು 4 ಸಾವಿರಕ್ಕೂ ಹೆಚ್ಚು ಜನ ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ. ಮೇ ಬಿ ಚೌಕಿದಾರ್ ಹ್ಯಾಶ್ ಟ್ಯಾಗ್ ಸೃಷ್ಟಿಯಾದ ಕೆಲವೇ ನಿಮಿಷಗಳಲ್ಲಿ ಟ್ವೀಟ್ಟರ್ ನ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಟ್ವೀಟ್ ನಲ್ಲಿ ಭಾರತದ ವಿವಿಧ ಸಂಸ್ಕೃತಿಯ, ವಿವಿಧ ಸ್ಥರದ, ವಿವಿಧ ಕ್ಷೇತ್ರದ, ವಿವಿಧ ವೃತ್ತಿಯ ಜನರೂ ಮೇ ಭೀ ಚೌಕಿದಾರ್ ಎನ್ನುತ್ತಿರುವ ಅರ್ಥವತ್ತಾದ ಹಾಡಿನಿಂದಿಗೆ ವಿಡಿಯೋವನ್ನೂ ಲಗತ್ತಿಸಲಾಗಿದೆ.

Leave a Reply

Your email address will not be published.