7 ಪುರಸಭೆ, 1 ನಗರಸಭೆಗೆ ಜಲಮಂಡಳಿಯಿಂದ, 110 ಹಳ್ಳಿಗಳಿಗೆ ಬಿಬಿಎಂಪಿಯಿಂದ ನೀರು ಪೂರೈಕೆ

ಚಳಿಗಾಲ ಮುಗಿಯುವ ಮುನ್ನವೇ ಬೇಸಿಗೆ ಆರಂಭವಾಗಿದೆ. ವಿಪರೀತಿ ಬಿಸಿಲಿಂದಾಗಿ ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ ಬಡಾವಣೆಗಳಿಗೆ ಬಿಬಿಎಂಪಿ ಮತ್ತು ಜಲಮಂಡಳಿಯಿಂದ ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಸರಬರಾಜು ಮಾಡಲು ನಿರ್ಧರಿಸಲಾಗಿದೆ.

ಶುಕ್ರವಾರ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಳೆಯ ವಾರ್ಡ್‌ಗಳು ಮತ್ತು ಹೊಸದಾಗಿ ಸೇರ್ಪಡೆಗೊಂಡ 7 ಪುರಸಭೆ ಮತ್ತು 1 ನಗರಸಭೆಗೆ ಜಲಮಂಡಳಿ ನೀರು ಪೂರೈಸಲಿದೆ. 110 ಹಳ್ಳಿಗಳಿಗೆ ಬಿಬಿಎಂಪಿಯಿಂದ ನೀರು ಪೂರೈಸಲು ನಿರ್ಧರಿಸಲಾಗಿದೆ.

ಪಾಲಿಕೆಯು 570 ಚದರ ಕಿ.ಮೀ ವ್ಯಾಪ್ತಿಯಲ್ಲಿ ಈಗಾಗಲೇ ಕಾವೇರಿ ನೀರು ಪೂರೈಸಲಾಗುತ್ತಿದೆ. ಒಂದು ವೇಳೆ ತಾಂತ್ರಿಕ ಸಮಸ್ಯೆ ಎದುರಾದರೆ ಜಲಮಂಡಳಿಯ 68 ಟ್ಯಾಂಕರ್ ಗಳ ಮೂಲಕ ನೀರು ಪೂರೈಸಲಾಗುತ್ತದೆ.

ಉಳಿದಂತೆ 110 ಹಳ್ಳಿಗಳಿಗೆ ಅಲ್ಲಿರುವ ಜಲಮಂಡಳಿಯ 1286 ಬೋರ್‌ವೆಲ್ ಮತ್ತು 41 ಜಲಾಗಾರಗಳಿಂದ ಬಿಬಿಎಂಪಿಯು 267 ಟ್ಯಾಂಕರ್ ಮೂಲಕ ನೀರನ್ನು ಒದಗಿಸಲಿದೆ. ಹೆಚ್ಚುವರಿ ಟ್ಯಾಂಕರ್ ಅಗತ್ಯವಿದ್ದರೆ ಟೆಂಡರ್ ಪ್ರಕ್ರಿಯೆ ನಡೆಸಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com