ಜನರ ಗಂಟಲೊಣಗಿಸುವ ದೇಶದ ಅಧಿಕ ತಾಪಮಾನವಿರುವ ಸ್ಥಳಗಳು ಯಾವವು ಗೊತ್ತಾ..?

ಚಳಿಗಾಲ ಮುಗಿಯುವ ಮುನ್ನವೇ ಬೇಸಿಗೆ ಆಗಮಿಸಿ ದೇಶದ ಜನರ ಗಂಟಲೊಣಗಿಸುತ್ತಿದೆ.

ಎಲ್ಲಿ ನೋಡಿದರೂ ಬರ, ನೀರಿನ ಸಮಸ್ಯೆ ಈಗಾಗಲೇ ಆರಂಭವಾಗಿದೆ. ಟ್ಯಾಂಕರ್‌ ನೀರಿಗೂ ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ದೇಶದಲ್ಲಿ ಶುಕ್ರವಾರ ಅತಿ ಹೆಚ್ಚು ತಾಪಮಾನ ಎಲ್ಲೆಲ್ಲಿ ದಾಖಲಾಗಿದೆ ಎನ್ನುವುದನ್ನು ನೋಡೋಣ.

ಬೇಸಿಗೆ ಸಮೀಪಿಸುತ್ತಿದ್ದಂತೆ ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮೇ ತಿಂಗಳು ಕಳೆದ ಮಳೆಗಾಲ ಆರಂಭವಾಗುವವರೆಗೂ ಇದೇ ಪರಿಸ್ಥಿತಿಯನ್ನು ಜನರು ಎದುರಿಸಬೇಕಿದೆ. ಸ್ಕೈಮೆಟ್ ವೆದರ್ ಡಾಟ್‌ಕಾಮ್ ಈ ಪಟ್ಟಿಯನ್ನು ಮಾಡಿದೆ.

ತಿರುಪತಿ-ಆಂಧ್ರಪ್ರದೇಶ-40.3 ಡಿಗ್ರಿ ಸೆಲ್ಸಿಯಸ್ , ಅನಂತಪುರ-ಆಂಧ್ರಪ್ರದೇಶ-40.2ಡಿಗ್ರಿ ಸೆಲ್ಸಿಯಸ್, ಥಿರುತ್ತನಿ-ತಮಿಳುನಾಡು-40.1 ಡಿಗ್ರಿ ಸೆಲ್ಸಿಯಸ್, ಕಲಬರಗಿ- ಕರ್ನಾಟಕ-39.8ಡಿಗ್ರಿ ಸೆಲ್ಸಿಯಸ್, ಕುರ್ನೂಲ್-ಆಂಧ್ರಪ್ರದೇಶ-39.6 ಡಿಗ್ರಿ ಸೆಲ್ಸಿಯಸ್, ಬ್ರಹ್ಮಪುರಿ-ಮಹಾರಾಷ್ಟ್ರ-39.4 ಡಿಗ್ರಿ ಸೆಲ್ಸಿಯಸ್, ಸೊಲ್ಲಾಪುರ-ಮಹಾರಾಷ್ಟ್ರ-38.9ಡಿಗ್ರಿ ಸೆಲ್ಸಿಯಸ್, ಟುಣಿ-ಆಂಧ್ರಪ್ರದೇಶ-38.9 ಡಿಗ್ರಿ ಸೆಲ್ಸಿಯಸ್ , ತ್ರಿಶೂರ್-ಮಹಾರಾಷ್ಟ್ರ-38.8 ಡಿಗ್ರಿ ಸೆಲ್ಸಿಯಸ್, ಆಮಾಗುಂಡಮ್-ತೆಲಂಗಾಣ-38.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com