ಟ್ವೀಟರ್ ನಲ್ಲಿ ನರೇಂದ್ರ ಮೋದಿಯವರ 27 ವರ್ಷ ಹಿಂದಿನ ಭಾಷಣದ ವಿಡಿಯೋ

ಲೋಕಸಭೆ ಚುನಾವಣೆ ಹತ್ತಿರ ಬರ್ತಿದ್ದಂತೆ ಪ್ರಚಾರದ ಭರಾಟೆ ಚುರುಕು ಪಡೆಯಲಿದೆ. ಎಲ್ಲ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ತಿವೆ.

ಆಡಳಿತ ಪಕ್ಷ ಬಿಜೆಪಿ ಏರ್ ಸ್ಟ್ರೈಕ್ ದಾಳಿಯನ್ನು ಮುಂದಿಟ್ಟುಕೊಂಡು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ನಾವು ಸದಾ ಸಿದ್ಧ ಎಂಬುದನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತಿದೆ. ಟ್ವೀಟರ್ ನಲ್ಲಿ ನರೇಂದ್ರ ಮೋದಿಯವರ 27 ವರ್ಷ ಹಿಂದಿನ ವಿಡಿಯೋ ಒಂದನ್ನು ಬಿಜೆಪಿ ಟ್ವೀಟ್ ಮಾಡಿದೆ.

ಜನವರಿ 24, 1992 ರಲ್ಲಿ ನರೇಂದ್ರ ಮೋದಿ ಮಾಡಿದ ಭಾಷಣದ ತುಣುಕು ಇದಾಗಿದೆ. ಲಾಲ್ ಚೌಕ್ ಗೆ ಹೋಗುವ ಮೊದಲು ಮೋದಿ ಮಾಡಿದ್ದ ಭಾಷಣ ಇದಾಗಿದೆ. ಭಾಷಣದಲ್ಲಿ ಮೋದಿ, ಜನವರಿ 26 ರಂದು ಲಾಲ್ ಚೌಕ್ ಗೆ ಅವಶ್ಯವಾಗಿ ಹೋಗ್ತೆನೆ. ಆಗ ಯಾರು ತಾಯಿ ಹಾಲು ಕುಡಿದವರು ಎಂಬುದು ಗೊತ್ತಾಗುತ್ತದೆ ಎಂದಿದ್ದರು. ಈ ಭಾಷಣದ ಜೊತೆ ಮಾರ್ಚ್ 4, 2019 ರಲ್ಲಿ ಏರ್ ಸ್ಟ್ರೈಕ್ ನಂತ್ರ ಮೋದಿ ಮಾಡಿದ ಭಾಷಣದ ತುಣುಕನ್ನು ಟ್ವೀಟ್ ಮಾಡಲಾಗಿದೆ.

ಸಿಂಹಗಳು ಬದಲಾಗುವುದಿಲ್ಲ ಎಂಬ ಶೀರ್ಷಿಕೆಯಡಿ ಈ ವಿಡಿಯೋ ಹಾಕಲಾಗಿದೆ. 1992ರಲ್ಲಿ ಜಮ್ಮು- ಕಾಶ್ಮೀರದ ಲಾಲ್ ಚೌಕ್ ನಲ್ಲಿ ನರೇಂದ್ರ ಮೋದಿ ತ್ರಿವರ್ಣ ಧ್ವಜ ಹಾರಿಸಿದ್ದರು. ಭಯೋತ್ಪಾದಕರ ಬೆದರಿಕೆ ಮಧ್ಯೆಯೂ ಮೋದಿ ಧ್ವಜ ಹಾರಿಸಿ ದೇಶಭಕ್ತಿ ಮೆರೆದಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com