ಜನರು ಇದನ್ನು ಆತ್ಮಹತ್ಯೆ ಎಂದುಕೊಳ್ಳುವಷ್ಟರಲ್ಲಿ ಹೊರಬಿತ್ತು ಸತ್ಯ : ಪತಿ ಕೋಪಕ್ಕೆ ಪತ್ನಿ ಬಲಿ

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅತ್ತೆ ಸತ್ತ ಬೇಸರದಲ್ಲಿ ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿಯೊಂದು ಹಬ್ಬಿತ್ತು. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಸೊಸೆ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ.ಕೊಲೆ ಮಾಡಲಾಗಿದೆ ಎಂಬ ಸಂಗತಿ ಬಹಿರಂಗವಾಗಿದೆ.

ಸೊಸೆಯನ್ನು ಆಕೆ ಗಂಡನೇ ಹತ್ಯೆಗೈದಿದ್ದಾನೆ. ಅತ್ತೆ ಸತ್ತ ಖುಷಿಯಲ್ಲಿದ್ದಳಂತೆ ಸೊಸೆ. ಇದು ಪತಿ ಕೋಪಕ್ಕೆ ಕಾರಣವಾಗಿದೆ. ಮನೆ ಮಹಡಿ ಮೇಲೆ ಕರೆದೊಯ್ದು ಕೆಳಗೆ ನೂಕಿದ್ದಾನೆ. ಜನರು ಇದನ್ನು ಆತ್ಮಹತ್ಯೆ ಎಂದುಕೊಂಡಿದ್ದರು. ಆದ್ರೆ ವಿಚಾರಣೆ ವೇಳೆ ಆರೋಪಿ ಸಂದೀಪ್ ಒಪ್ಪಿಕೊಂಡಿದ್ದಾನೆ.

ಸೊಸೆ ಶುಭಾಂಗಿ, ಅತ್ತೆ ಮಾಲತಿ ಸಾವನ್ನಪ್ಪಿದ್ದಕ್ಕೆ ಖುಷಿಯಾಗಿದ್ದಳು ಎನ್ನಲಾಗಿದೆ. ಮಾಲತಿ ಸಾವು ಸಹಜ ಸಾವಾಗಿತ್ತು. ಆದ್ರೆ ಶುಭಾಂಗಿಯನ್ನು ಕೋಪಗೊಂಡ ಪತಿಯೇ ಹತ್ಯೆಗೈದಿದ್ದಾನೆ.

Leave a Reply

Your email address will not be published.