ದಕ್ಷಿಣ ಐಸ್​ಲೆಂಡ್​ ನ ಮಸೀದಿಯೊಂದರಲ್ಲಿ ಬೆಳ್ಳಂಬೆಳಗ್ಗೆ ಶೂಟೌಟ್​ : 27 ಮಂದಿ ಸಾವು

ನ್ಯೂಜಿಲೆಂಡ್​ನ ದಕ್ಷಿಣ ಐಸ್​ಲೆಂಡ್​ ನ ಮಸೀದಿಯೊಂದರಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಶೂಟೌಟ್​ ನಡೆದಿದ್ದು, ಈ ವೇಳೆ ಸ್ಥಳದಲ್ಲಿದ್ದ ಬಾಂಗ್ಲಾ ಕ್ರಿಕೆಟ್​ ತಂಡದ ಆಟಗಾರರು ಬಚಾವ್ ಆಗಿದ್ದಾರೆ.

ಮಸೀದಿಯೊಂದಕ್ಕೆ ಬಾಂಗ್ಲಾ ಕ್ರಿಕೆಟ್ ತಂಡ ಹೋಗಿತ್ತು, ಅದೇ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದ್ದು, ಆಟಗಾರರು ಓಡಿಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಬಹುದೊಡ್ಡ ಅನಾಹುತ ತಪ್ಪಿದೆ. ಬಾಂಗ್ಲಾ ದೇಶದ ಪತ್ರಕರ್ತ ಮೊಹ್ಮದ್​ ಇಸ್ಲಾಮ್​ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಬಾಂಗ್ಲಾ ಕ್ರಿಕೆಟ್​ ತಂಡ ಕೂದಲೆಳೆಯಲ್ಲಿ ಬಚಾವ್​ ಆಗಿ ಪ್ರಾಣ ಉಳಿಸಿಕೊಂಡಿದೆ.

27 ಮಂದಿ ಮೃತಪಟ್ಟಿದ್ದಾರೆ. ಆದರೆ ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ ಎನ್ನುವ ಅನುಮಾನಗಳು ವ್ಯಕ್ತವಾಗಿದೆ. ಪ್ರತ್ಯಕ್ಷದರ್ಶಿಗಳು ದಾಳಿವೇಳೆ ಸಾಕಷ್ಟು ಜನರು ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ.ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಯೋರ್ವ ಗನ್​ ಹಿಡಿದುಕೊಂಡು ನಿಂತಿದ್ದ. ಸಾಕಷ್ಟು ಬಾರಿ ಗುಂಡಿನ ಮೊರೆತ ಕೇಳಿದೆ. ಸಾಕಷ್ಟು ಜನರು ಮೃತಪಟ್ಟ ಅನುಮಾನವಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪೊಲೀಸ್​ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಕ್ರಿಕೆಟ್​ ಆಟಗಾರರನ್ನು ಗುರಿಯಾಗಿಸಿಕೊಂಡೇ ಈ ದಾಳಿ ನಡೆದಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ.

ಬಾಂಗ್ಲಾ ಕ್ರಿಕೆಟ್ ಆಟಗಾರರು ತಾವು ಇದ್ದ ಹೋಟೆಲ್‌ಗೆ ಸುರಕ್ಷಿತವಾಗಿ ಮರಳಿದ್ದಾರೆ.

ಈ ದಿನ ನ್ಯೂಜಿಲ್ಯಾಂಡ್‌ಗೆ ಒಂದು ಕರಾಳ ದಿನ, ಹಿಂದೆಂದೂ ಕಂಡಿರದ ಹಿಂಸಾಚಾರ ಇದಾಗಿದೆ. ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಬರಬೇಕಿದೆ ಎಂದು ನ್ಯೂಜಿಲ್ಯಾಂಡ್‌ನ ಪ್ರಧಾನಿ ಜಸಿಂಡಾ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com