‘ನ್ಯೂಜಿಲೆಂಡ್ ಪಾಲಿಗೆ ಕರಾಳ ದಿನ’ ಮನನೊಂದ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ

ನ್ಯೂಜಿಲೆಂಡ್ ಪಾಲಿಗೆ ಇದೊಂದು ಕರಾಳ ದಿನ ಎಂದು ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ತಿಳಿಸಿದ್ದಾರೆ. ಕ್ರಿಸ್ಟ್‌ ಚರ್ಚ್ ಬಳಿ ಓರ್ವ ಗನ್‌ಮ್ಯಾನ್ 27ಕ್ಕೂ ಹೆಚ್ಚು ಅಮಾಯಕರನ್ನು ಶೂಟ್ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ ಇಂತಹ ಹಿಂಸಾಚಾರವನ್ನು ಹಿಂದೆಂದೂ ಕಂಡಿರಲಿಲ್ಲ. ಇದು ನ್ಯೂಜಿಲ್ಯಾಂಡ್ ಪಾಲಿಗೆ ಕರಾಳ ದಿನ ಎಂದು ಜಸಿಂಡಾ ಹೇಳಿಕೊಂಡಿದ್ದಾರೆ.

ಮಸೀದಿಯು ನಿತ್ಯ ಭಕ್ತರಿಂದ ತುಂಬಿರುತ್ತದೆ. ಶುಕ್ರವಾಳ ಬೆಳಗ್ಗೆ ಬಾಂಗ್ಲಾ ಕ್ರಿಕೆಟಿಗರು ಮಸೀದಿಗೆ ಆಗಮಿಸುತ್ತಿದ್ದಂತೆ ಗುಂಡಿನ ದಾಳಿ ಆರಂಭವಾಗಿದೆ. ಬಳಿಕ ಕ್ರಿಕೆಟ್ ಆಟಗಾರರು ಮಸೀದಿಯೊಳಗೆ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಆಟಗಾರರಿಗೆ ಯಾವುದೇ ರೀತಿಯ ಅಪಾಯವಾಗದೇ ಇದ್ದರೂ ಕೂಡ ಶಾಕ್‌ನಿಂದ ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ದಾಳಿಗೆ ಕಾರಣನಾದ ಓರ್ವನನ್ನು ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

ಈಗಾಗಲೇ 27ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ, ಖಚಿತ ಮಾಹಿತಿ ಇನ್ನೂ ಹೊರ ಬರಬೇಕಿದೆ. ಆತ ಪ್ರತಿಯೊಒಬ್ಬರ ತಲೆಗೆ ಗುರಿ ಇಟ್ಟು ಶೂಟ್ ಮಾಡುತ್ತಿದ್ದ, ಪ್ರತಿ 10 ಸೆಕೆಂಡುಗಳ ಬಳಿಕ ಗುಂಡು ಹಾರಿಸುತ್ತಿದ್ದ.

ಜನರು ಓಡಲು ಆರಂಭಿಸಿದರು, ಸಾಕಷ್ಟು ಮಂದಿ ಮೈಮೇಲೆ ರಕ್ತದ ಕಲೆಗಳಿದ್ದವು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವಿರಿಸಿದ್ದಾರೆ. ನ್ಯೂಜಿಲ್ಯಾಂಡ್‌ನಲ್ಲಿ ಮಾಸ್ ಶೂಟಿಂಗ್ ನಡೆದಿದ್ದು ಕಡಿಮೆ 1992 ರ ಬಳಿಕ ಎರಡನೇ ಬಾರಿಗೆ ಈ ರೀತಿ ಅವಘಡ ಸಂಭವಿಸಿದೆ. ಅಂದು 13 ಮಂದಿ ಮೃತಪಟ್ಟಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com