2 ಮಸೀದಿಗಳ ಮೇಲೆ ಗುಂಡಿನ ದಾಳಿ : ನ್ಯೂಜಿಲ್ಯಾಂಡ್ -ಬಾಂಗ್ಲಾ ವಿರುದ್ಧ 3ನೇ ಪಂದ್ಯ ರದ್ದು

ನ್ಯೂಜಿಲ್ಯಾಂಡ್ ನ ಎರಡು ಮಸೀದಿಗಳ ಮೇಲೆ ಗುಂಡಿನ ದಾಳಿ ನಡೆದಿದೆ. ದುಷ್ಕರ್ಮಿಗಳ ದಾಳಿಗೆ 27 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಅನೇಕರು ಗಾಯಗೊಂಡಿದ್ದು, ಮಸೀದಿಯಲ್ಲಿ ನಮಾಜ್ ಮಾಡ್ತಿದ್ದ ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರು ಸುರಕ್ಷಿತವಾಗಿದ್ದಾರೆ.

ಮಸೀದಿ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದ ವೇಳೆ ಆಟಗಾರರು ಮಸೀದಿಯೊಳಗೆ ನಮಾಜ್ ಮಾಡ್ತಿದ್ದರಂತೆ. ತಕ್ಷಣ ಅವ್ರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದೆ.

ಈ ಬಗ್ಗೆ ಆಟಗಾರರು ಹಾಗೂ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಟ್ವಿಟ್ ಮಾಡಿದೆ. ಎಲ್ಲ ಆಟಗಾರರು ಸುರಕ್ಷಿತವಾಗಿದ್ದಾರೆಂದು ಕ್ರಿಕೆಟ್ ಬೋರ್ಡ್ ತಿಳಿಸಿದೆ. ನಾವೆಲ್ಲ ಸುರಕ್ಷಿತವಾಗಿದ್ದೇವೆ. ಅಲ್ಲಾ ಕೃಪೆ ನಮ್ಮ ಮೇಲಿತ್ತು ಎಂದು ಆಟಗಾರರು ಹೇಳಿದ್ದಾರೆ. ಘಟನೆ ವೇಳೆ ಕೆಲ ಆಟಗಾರರು ಬಸ್ ನಲ್ಲಿ, ಕೆಲ ಆಟಗಾರರು ಮಸೀದಿಯಲ್ಲಿ ಇದ್ದರು ಎನ್ನಲಾಗಿದೆ.

ಶನಿವಾರ ನ್ಯೂಜಿಲ್ಯಾಂಡ್ ಹಾಗೂ ಬಾಂಗ್ಲಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ನಡೆಯಬೇಕಿತ್ತು. ಘಟನೆ ಹಿನ್ನೆಲೆಯಲ್ಲಿ ಪಂದ್ಯವನ್ನು ರದ್ದು ಮಾಡಲಾಗಿದೆ. ಆಟಕ್ಕಿಂತ ಆಟಗಾರರ ಸುರಕ್ಷತೆ ಮುಖ್ಯ. ಘಟನೆಯಿಂದ ಚೇತರಿಸಿಕೊಳ್ಳಲು ಆಟಗಾರರಿಗೆ ಕೆಲ ಸಮಯ ಬೇಕು ಎಂದು ವಕ್ತಾರರು ಹೇಳಿದ್ದಾರೆ.

ದಾಳಿ ವೇಳೆ ದುಷ್ಕರ್ಮಿಗಳು ಫೇಸ್ಬುಕ್ ನಲ್ಲಿ ಲೈವ್ ಬಂದಿದ್ದರು ಎನ್ನಲಾಗಿದೆ. ಸುಮಾರು 17 ನಿಮಿಷಗಳ ಕಾಲ ಫೈರಿಂಗ್ ನ ಲೈವ್ ವಿಡಿಯೋ ಫೇಸ್ಬುಕ್ ನಲ್ಲಿ ಅಪ್ಲೋಡ್ ಆಗಿದೆಯಂತೆ. ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬ್ರೆಂಟ್ಟನ್ ಟೆರಂಟ್ ಎನ್ನಲಾಗಿದ್ದು, ಆಸ್ಟ್ರೇಲಿಯಾ ಮೂಲದವನಂತೆ. ಅಲ್ ನೂರಾನಿ ಮಸೀದಿ ಬಳಿ ಗಾಡಿ ಪಾರ್ಕ್ ಮಾಡಿದ ಬಂದೂಕು ದಾರಿಗಳು, ಮಸೀದಿ ಒಳ ನುಗ್ಗಿ ಫೈರಿಂಗ್ ಶುರು ಮಾಡಿದ್ದಾರೆ. ಕಪ್ಪು ಬಟ್ಟೆ ಧರಿಸಿದ್ದ ಬಂದೂಕುದಾರಿಗಳು ಮುಖಕ್ಕೆ ಹೆಲ್ಮೆಟ್ ಧರಿಸಿದ್ದರಂತೆ.

 

Leave a Reply

Your email address will not be published.