ಎಲ್ಲರ ಹೀರೋ ಅಭಿನಂದನ್ : ಅಭಿ ಮೀಸೆ ಆಯ್ತು, ಮಗುವಿಗೆ ಹೆಸರಿಟ್ಟಾಯ್ತು, ಸದ್ಯ ಕಲ್ಲಂಗಡಿ ಸರದಿ..!

ಭಾರತದ ವಿರುದ್ದ ಕ್ಯಾತೆ ತೆಗೆದಿದ್ದ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಉರುಳಿಸಿ ಪಾಕ್ ಸೈನಿಕರಿಗೆ ಸೆರೆ ಸಿಕ್ಕಿ ಸುಮಾರು ನಾಲ್ಕು ದಿನಗಳ ಕಾಲ ಚಿತ್ರಹಿಂಸೆ ಅನುಭವಿಸಿದರೂ ತಮ್ಮ ಗುಟ್ಟು ಬಿಟ್ಟು ಕೊಡದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಇದೀಗ ಎಲ್ಲರ ಹೀರೋ.

ಅವರಿಗೆ ಗೌರವ ನೀಡುವ ನಿಟ್ಟಿನಲ್ಲಿ ಕೆಲವರು ತಮ್ಮ ಮೀಸೆಯನ್ನು ಅಭಿನಂದನ್ ರೀತಿ ಮಾಡಿಸಿಕೊಳ್ಳುತ್ತಿದ್ದರೆ, ಇನ್ನು ಕೆಲವರು ತಮಗೆ ಹುಟ್ಟಿದ ಮಕ್ಕಳಿಗೆ ಅಭಿನಂದನ್‌‌ ಹೆಸರಿಟ್ಟಿದ್ದಾರೆ. ಆದರೆ ಇಲ್ಲೊಬ್ಬರು, ಅಭಿನಂದನ್ ಅವರ ಮುಖವನ್ನು ಕಲ್ಲಂಗಡಿಯಲ್ಲಿ ಮೂಡಿಸಿದ್ದಾರೆ.

ಹೌದು, ದೆಹಲಿಯಲ್ಲಿ ಕಲಾ ಪ್ರದರ್ಶನ ನಡೆಯುತ್ತಿದ್ದು,‌ ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಈ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬಾಣಸಿಗರಾಗಿದ್ದ ಜಿತೇಂದ್ರ ಎನ್ನುವ ಶೆಫ್, ಕಲ್ಲಂಗಡಿಯಲ್ಲಿ ಅಭಿನಂದನ್ ಮುಖ‌ ರೂಪಿಸಿದ್ದಾರೆ‌.

ಕಲ್ಲಂಗಡಿಯಲ್ಲಿ ರೂಪುಗೊಂಡಿರುವ‌ ಅಭಿನಂದನ್ ಮುಖದೊಂದಿಗೆ ಜೈಹಿಂದ್ ಎನ್ನುವ ಘೋಷವಾಕ್ಯವನ್ನು ಬರೆದಿರುವ ಜಿತೇಂದ್ರ ಅವರ ಕ್ರಿಯಾಶೀಲತೆಗೆ ತೀರ್ಪುಗಾರರು ಶಹಬಾಸ್‌ಗಿರಿ ನೀಡಿದ್ದಾರೆ. ಇನ್ನು ಅಭಿನಂದನ್ ಮುಖ ಕೆತ್ತಿರುವ ವಿಡಿಯೋವನ್ನು ಆಯೋಜಕರು ಟ್ವೀಟ್ ಮಾಡಿದ್ದು, ಇದೀಗ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com