ಮಂಡ್ಯದಲ್ಲಿ ಚುನಾವಣಾ ಕಣ : ಜೋರಾದ ಸುಮಲತಾ-ಮೈತ್ರಿಕೂಟದ ಮಾತಿನ ಸಮರ

ಮಂಡ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರ್ ಮತ್ತು ಸುಮಲತಾ ಅಂಬರೀಶ್ ಅವರು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

ಇದೇ ವೇಳೆ ಮಾತಿನ ಸಮರವೂ ಜೋರಾಗತೊಡಗಿದೆ. ಪ್ರಾಮಾಣಿಕತೆಗೆ ಮೋಸ ಮಾಡುವ ರಾಜಕೀಯ ಬೇಕಾಗಿಲ್ಲ ಎಂದು ಫೇಸ್ಬುಕ್ ನಲ್ಲಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಇದ್ದದ್ದು ಇದ್ದ ಹಾಗೆ ಹೇಳುವ ರಾಜಕೀಯ ಅಂಬರೀಶ ಅವರದಾಗಿತ್ತು. ಅವರ ರಾಜಕೀಯ ಅತ್ಯುತ್ತಮ. ಸಮಯಕ್ಕೆ ತಕ್ಕ ಹಾಗೆ ಮಾತನಾಡುವ ಜಾಯಮಾನ ಮಂಡ್ಯದ ಮಣ್ಣಲ್ಲಿ ಇಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ. ಈ ಮೂಲಕ ಜೆಡಿಎಸ್ ವರಿಷ್ಠರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.