ಭಯೋತ್ಪಾದಕ ಮಸೂದ್ ಅಜರ್ ಆಸ್ತಿ ಮುಟ್ಟುಗೋಲು – ಫ್ರಾನ್ಸ್ ತೀರ್ಮಾನ

ಜಾಗತಿಕ ಉಗ್ರ, ಪಾಕಿಸ್ತಾನದಲ್ಲಿ ಬೀಡುಬಿಟ್ಟಿರುವ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖಂಡ ಮಸೂದ್ ಅಜರ್ ಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಫ್ರಾನ್ಸ್ ಸರಕಾರ ಹೇಳಿದೆ.

ಫ್ರಾನ್ಸ್ ನ ಆಂತರಿಕ ಸಚಿವಾಲಯ, ಹಣಕಾಸು ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯ ಜಂಟಿಯಾಗಿ ನೀಡಿರುವ ಹೇಳಿಕೆಯಲ್ಲಿ, ಭಯೋತ್ಪಾದನೆಯಲ್ಲಿ ನಿರತರಾಗಿರುವ ಶಂಕಿತ ಉಗ್ರರ ಯುರೋಪಿಯನ್ ಯೂನಿಯನ್ ಪಟ್ಟಿಯಲ್ಲಿ ಮಸೂದ್ ಅಜರ್ ಹೆಸರನ್ನು ಸೇರಿಸಲಾಗುವುದು ಎಂದಿವೆ.

ಜೈಷ್-ಎ-ಮೊಹಮ್ಮದ್ ಸೇರಿದಂತೆ ಭಾರತದ ಮೇಲೆ ಆಕ್ರಮಣ ಮಾಡುತ್ತಿರುವ ಉಗ್ರ ಸಂಘಟನೆಯ ವಿರುದ್ಧ ವಿಶ್ವದ ಹಲವಾರು ರಾಷ್ಟ್ರಗಳು ಸಿಡಿದೆದ್ದಿವೆ. ಫೆಬ್ರವರಿ 14ರಂದು ಜೈಷ್-ಎ-ಮೊಹಮ್ಮದ್ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಭಾರತದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಪೊಲೀಸ್ ಮೀಸಲು ಪಡೆಯ 40ಕ್ಕೂ ಹೆಚ್ಚು ಜವಾನರು ಹುತಾತ್ಮರಾಗಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com