ಭಾರತದಲ್ಲಿ ಆರು ಅಣು ವಿದ್ಯುತ್ ಘಟಕ ನಿರ್ಮಿಸುವ ಅಮೆರಿಕ: ಒಪ್ಪಂದ

ಭಾರದಲ್ಲಿ ಆರು ಅಣುಶಕ್ತಿ ವಿದ್ಯುತ್ ಉತ್ಪಾದನಾ ಘಟಕಗಳ ನಿರ್ಮಾಣಕ್ಕೆ ಹೊಸದಿಲ್ಲಿ ಮತ್ತು ವಾಷಿಂಗ್ಟನ್ ಒಪ್ಪಿಕೊಂಡಿವೆ.

ಭಾರತದ ವಿದೇಶ ಕಾರ್ಯದರ್ಶಿ ವಿಜಯ್ ಗೋಖೆ ಮತ್ತು ಅಮೆರಿಕದ ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಅಂತಾರಾಷ್ಟ್ರೀಯ ಭದ್ರತೆಯ ಸಹಾಯಕ ಅಧೀನ ಕಾರ್ಯದರ್ಶಿ ಆಯಂಡ್ರಿಯಾ ಥಾಂಪ್ಸನ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ನಡೆದ ಭಾರತ – ಅಮೆರಿಕ ವ್ಯೂಹಾತ್ಮಕ ಭದ್ರತಾ ಮಾತುಕತೆಯ 9ನೇ ಸುತ್ತಿನ ಸಮಾಪನದಲ್ಲಿ ಉಭಯ ದೇಶಗಳು ಜಂಟಿ ಹೇಳಿಕೆ ಹೊರಡಿಸಿ ಈ ವಿಷಯವನ್ನು ಬಹಿರಂಗಪಡಿಸಿದವು.

ಉಭಯ ದೇಶಗಳು ದ್ವಿಪಕ್ಷೀಯ ಭದ್ರತೆ ಮತ್ತು ಪೌರ ಅಣುಶಕ್ತಿ ಸಹಕಾರವನ್ನು ಬಲಪಡಿಸುವ ದಿಶೆಯಲ್ಲಿನ ತಮ್ಮ ಬದ್ಧತೆಯನ್ನು ಸಾರಿದವಲ್ಲದೆ ಭಾರತದಲ್ಲಿ ಅಮೆರಿಕದ ಆರು ಅಣು ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡವು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಭಾರತ ಮತ್ತು ಅಮೆರಿಕ 2008ರ ಅಕ್ಟೋಬರ್‍ನಲ್ಲಿ ಅಣುಶಕ್ತಿ ಇಂಧನ ವಲಯದಲ್ಲಿ ಸಹಕಾರ ಹೊಂದುವ ಒಪ್ಪಂದಕ್ಕೆ ಸಹಿ ಹಾಕಿವೆ.

Leave a Reply

Your email address will not be published.

Social Media Auto Publish Powered By : XYZScripts.com