ಮಾಲಿನ್ಯ ನಿಯಂತ್ರಣಕ್ಕೆ ಅತ್ಯಂತ ಉತ್ತಮ ವಾಹನ : ಸೈಕಲ್ ಸವಾರರಿಗೆ ಸರ್ಕಾರದಿಂದ ಹಣ!

ದಿನ ದಿನಕ್ಕೂ ಮಾಲಿನ್ಯ ಹೆಚ್ಚಾಗ್ತಿದೆ. ವಾಹನ ದಟ್ಟಣೆ ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣವಾಗ್ತಿದೆ. ಸೈಕಲ್, ಮಾಲಿನ್ಯ ನಿಯಂತ್ರಣಕ್ಕೆ ಅತ್ಯಂತ ಉತ್ತಮ ವಾಹನ. ಜೊತೆಗೆ ಆರೋಗ್ಯ ವೃದ್ಧಿಗೂ ಇದು ಕಾರಣವಾಗುತ್ತದೆ. ಸೈಕಲ್ ಸವಾರಿ ಈಗ ಕಡಿಮೆಯಾಗಿದೆ. ಆದ್ರೆ ಈ ದೇಶದಲ್ಲಿ ಸೈಕಲ್ ಸವಾರರಿಗೆ ಸರ್ಕಾರ ಹಣ ನೀಡ್ತಿದೆ.

ಸೈಕಲ್ ನಲ್ಲಿ ಕಚೇರಿಗೆ ಹೋದ್ರೆ ಹಣ ನೀಡುವ ದೇಶ ನೆದರ್ಲ್ಯಾಂಡ್. ಈ ದೇಶದಲ್ಲಿ ಜನಸಂಖ್ಯೆಗಿಂತ ಹೆಚ್ಚು ಸೈಕಲ್ ಇದೆ. ಸೈಕಲ್ ಮೂಲಕ ಕಚೇರಿಗೆ ಹೋದ್ರೆ ಅಂಥವರಿಗೆ ಪ್ರತಿ ಕಿಲೋಮೀಟರ್ ಗೆ 16 ರೂಪಾಯಿಯಂತೆ ಹಣ ನೀಡುತ್ತದೆ ಸರ್ಕಾರ. ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಈ ಯೋಜನೆ ಶುರು ಮಾಡಿದೆ.

ಇದಲ್ಲದೆ ಸೈಕಲ್ ಮೂಲಕ ಕಚೇರಿಗೆ ಹೋಗುವ ಹಾಗೂ ಬರುವ ಉದ್ಯೋಗಿಗಳಿಗೆ ತೆರಿಗೆಯಲ್ಲಿ ವಿನಾಯತಿ ಸಿಗಲಿದೆಯಂತೆ. ವ್ಯಕ್ತಿ ಕೆಲಸ ಮಾಡುವ ಕಚೇರಿ ವತಿಯಿಂದ ಈ ಸೌಲಭ್ಯ ಉದ್ಯೋಗಿಗೆ ಸಿಗಲಿದೆಯಂತೆ. ಕಚೇರಿಗೆ ಸೈಕಲ್ ಮೇಲೆ ಹೋದ್ರೆ ಮಾತ್ರ ಪ್ರತಿ ಕಿಲೋಮೀಟರ್ ಗೆ 16 ರೂಪಾಯಿ ಸಿಗಲಿದೆ. ವೈಯಕ್ತಿಕ ಕೆಲಸಕ್ಕೆ ಹೋದ್ರೆ ಹಣ ಸಿಗುವುದಿಲ್ಲ.

 

Leave a Reply

Your email address will not be published.

Social Media Auto Publish Powered By : XYZScripts.com