ಅಚ್ಚರಿಯಾದರೂ ಇದು ನಿಜ : ನರಿ ದಾಳಿಯಿಂದ ಕೋಳಿ ಸಾಯಲಿಲ್ಲ, ಕೋಳಿಗಳಿಂದ ಸತ್ತಿತು ನರಿ..!

ಸಾಮಾನ್ಯವಾಗಿ ಕೋಳಿಗಳ ಮೇಲೆ‌ ನರಿ ದಾಳಿ ನಡೆಸಿ ಸಾಯಿಸುವುದನ್ನು ಕೇಳಿರುತ್ತೀರಾ. ಆದರೆ ನರಿಯನ್ನೇ ಕೋಳಿಗಳ ಗುಂಪು ಕೊಂದಿದೆ ಎಂದರೆ?

ಹೌದು, ಅಚ್ಚರಿಯಾದರೂ ಇದು ನಿಜ. ಫ್ರಾನ್ಸ್‌ನ ಈಶಾನ್ಯ ಭಾಗದಲ್ಲಿರುವ ಫಾರ್ಮ್ ಒಂದರಲ್ಲಿ ಈ‌ ಘಟನೆ ನಡೆದಿದೆ‌.

ವರದಿಗಳ ಪ್ರಕಾರ, ಕೃಷಿ ಕಾಲೇಜಿನಲ್ಲಿರುವ ಕೋಳಿ ಸಾಕಣೆ ಮಾಡುತ್ತಿರುವ‌ ಪ್ರದೇಶಕ್ಕೆ ನರಿಯೊಂದು ದಾಳಿ ನಡೆಸಿದೆ. ಆಟೋಮ್ಯಾಟಿಕ್ ಲೈಟ್ ಡೋರ್‌ಗಳು ಇರುವುದರಿಂದ ನರಿ ಬರುತ್ತಿದ್ದಂತೆ ಸಿಕ್ಕಿಹಾಕಿಕೊಂಡಿದೆ. ಈ‌ ವೇಳೆ ಕೋಳಿಗಳ‌ ಹಿಂಡು ನರಿಯ ಮೇಲೆ ದಾಳಿ ನಡೆಸಿವೆ.

ಈ‌ ಬಗ್ಗೆ ಮಾತನಾಡಿರುವ ಶಾಲೆಯ ಫಾರ್ಮಿಂಗ್ ಮುಖ್ಯಸ್ಥ ಪಾಸ್ಕಲ್ ಡೇನಿಯಲ್, ಮೂಲೆಯೊಂದರಲ್ಲಿ ನರಿಯ ಮೃತದೇಹ ಸಿಕ್ಕಿದೆ. ಈ ವೇಳೆ ಕೋಳಿಗಳ ಗುಂಪು ಕೊಕ್ಕಿನಿಂದ ಕುಕ್ಕಿರುವ ಗಾಯಗಳು ದೇಹದ ಮೇಲೆ ಕಂಡಿವೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com