ಸರಿಗಮಪ ಸೀಸನ್ 16 : 19 ಪುಟಾಣಿ ಗಾನಕೋಗಿಲೆಗಳ ಹೆಸರು ನಿರ್ಧಾರ

ಜೀ಼ ಕನ್ನಡ ವಾಹಿನಿಯ ಸರಿಗಮಪ ಸೀಸನ್ 16ರಲ್ಲಿ ಹಾಡುವ 19ಪುಟಾಣಿ ಗಾನಕೋಗಿಲೆಗಳ ಹೆಸರನ್ನುನಿರ್ಧಾರ ಮಾಡಲಾಗಿದೆ. ನಿಮ್ಮ ನೆಚ್ಚಿನ ಜೀ಼ ವಾಹಿನಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 8:00 ಗಂಟೆಗೆ ತಪ್ಪದೇ ವೀಕ್ಷಿಸಿ ಪ್ರತಿಭಾವಂತ ಪುಟಾಣಿ ಗಾಯರ ಸ್ವರ ಸಮರ.

 ಸಂಗೀತ ಸಾಧಕರಿಗೆ ವೇದಿಕೆಯಾಗಿ, ಸಂಗೀತ ಕಲಿಯುವವರಿಗೆ ಸ್ಪೂರ್ತಿಯಾಗಿರುವ ಕನ್ನಡಿಗರ ಪ್ರೀತಿಯ ನೆಚ್ಚಿನ ಸಂಗೀತ ಕಾರ್ಯಕ್ರಮ ಸರಿಗಮಪ. ರಿಯಾಲಿಟಿ ಶೋಗಳ ಇತಿಹಾಸದಲ್ಲಿ ತನ್ನದೇ ‍ಛಾಪು ಮೂಡಿಸಿರುವ ಜೀ಼ ಕನ್ನಡ ಕರುನಾಡ ಪುಟ್ಟ ಗಾಯಕರಿಗೆ ಸರಿಗಮಪ ಲಿಟಲ್ಚಾಂಪ್ಸ್ಸೀಸನ್ಹದಿನಾರಕ್ಕೆ ಸಂಪೂರ್ಣವಾಗಿ ಸಜ್ಜಾಗಿದೆ.

ಸರಿಗಮಪಲಿಟಲ್ಚಾಂಪ್ಸ್ತಂತ್ರಜ್ಞರು ಮೂರು ತಂಡಗಳಾಗಿ ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಬರೋಬ್ಬರಿ ಮೂವತ್ತು ಜಿಲ್ಲೆಗಳಲ್ಲಿ ಹಾಡಲು ಬಯಸುವ ಎಲ್ಲಾ ಮಕ್ಕಳ ಧ್ವನಿಕೇಳಿ, ಅಳೆದು ತೂಗಿ ಮೂವತ್ತು ಪುಟಕ್ಕಿಟ್ಟ ಪುಟ್ಟ ರತ್ನಗಳ ನ್ನಸರಿಗಮಪ ಸೀಸನ್ 16ರ ಸಂಗೀತ ವೇದಿಕೆಗೆ ತಂದಿದ್ದರು.

ಎರಡು ವಾರಗಳ ಕಾಲ ನಡೆದ ಮೆಗಾ ಆಡಿಶನ್‌ನಲ್ಲಿ ಒಬ್ಬರಿಗಿಂತ ಒಬ್ಬರು ಸೊಗಸಾಗಿ ಹಾಡಿಜಡ್ಜಸ್‌ಗಳ ಮನೆಗೆದ್ದು ಹಿಂದೆಂದೂ ನೀಡದ ವಿಶೇಷ ಹಾಗೂ ಮಹತ್ತರ ತೀರ್ಪೊಂದನ್ನು ಈ ಬಾರಿಯ ಸೀಸನ್‌ನಲ್ಲಿ ನೀಡುವ ಹಾಗೆ ಮಾಡಿದ್ದಾರೆ. ಮೆಗಾ ಆಡಿಶನ್‌ನಲ್ಲಿ ಪ್ರದರ್ಶನ ನೀಡಿದ 30 ಸ್ಪರ್ದಿಗಳಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ 19 ಪ್ರತಿಭೆಗಳು ಸ್ಪರ್ದೆಯಲ್ಲಿ ಹಾಡುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಮುಂದೆ ತಮ್ಮ ವಿಶಿಷ್ಟ ಗಾಯನದ ಮೂಲಕ ನಿಮ್ಮನ್ನು ಮನರಂಜಿಸಲು ಬರುತ್ತಿರುವ 19 ಜನ ಪುಟಾಣಿ ಗಾಯಕರ ಹೆಸರುಗಳು ಹೀಗಿದೆ.

 1. ಸಾಕ್ಷಿ
 2. ಮೋನಮ್ಮ
 3. ಶುಭದ
 4. ಓಂಕಾರ್
 5. ಕೀರ್ತಿ
 6. ಮೀರಾ
 7. ಜೋಷಿತ
 8. ರುಬೀನಾ
 9. ಪರ್ನಿಕ
 10. ಭಾರ್ಗವ್
 11. ರೋಹನ್
 12. ಸಂಗೀತ
 13. ಅಪ್ರಮೇಯ
 14. ಗುರುಕಿರಣ್
 15. ಜ್ಞಾನ
 16. ನಯನ
 17. ಸುನದ್
 18. ಶ್ರೇಯಸ್
 19. ಅಭಿಶ್ಯತ್

 

ಈ ಬಾರಿಯೂ ಕೂಡ ಸರಿಗಮಪದ ನಾಲ್ಕು ಕರುನಾಡ ಸಂಗೀತ ಶ್ರೇಷ್ಟರ ಏಕೈಕ ಮಹಾನ್ಜಡ್ಜಿಂಗ್ಪ್ಯಾನೆಲ್ಮುಂದುವರೆಯುತ್ತಿದೆ. ಇನ್ನು ಹದಿನಾರನೇ ಸೀಸನ್‌ಗೆ ಹಾಡಲು ಬರುವ ಪುಟಾಣಿಗಳ ಸಂಗೀತ ಸಾಧನೆಗೆ ಮಾರ್ಗದರ್ಶನ ನೀಡಲು ಮಹಾಗುರುಗಳಾದ ನಾದಬ್ರಹ್ಮಹಂಸಲೇಖರವರ ಜೊತೆಗೆ ಪ್ರಖ್ಯಾತಗಾಯಕರಾದ  ವಿಜಯ್ಪ್ರಕಾಶ್, ರಾಜೇಶ್ಕೃಷ್ಣನ್, ಅರ್ಜುನ್ ಜನ್ಯ ಜೊತೆಯಿರುತ್ತಾರೆ. ಇನ್ನು ಕನ್ನಡದ ರಾಕಿಂಗ್ನಿ ರೂಪಕಿ ಅನುಶ್ರೀಯವರ ಸಾರಥ್ಯದಲ್ಲಿ ಸರಿಗಮಪ ಲಿಟಲ್ಚಾಂಪ್ಸ್ಸೀಸನ್ 16 ಇದೇ ಮಾರ್ಚ್2 ರ ಶನಿವಾರದಿಂದ ರಾತ್ರಿ 8 ಗಂಟೆಗೆ ನಿಮ್ಮ ಜೀ಼ ವಾಹಿನಿಯಲ್ಲಿ ಪ್ರಸಾರವಾಗಿದ್ದು 19 ಪುಟಾಣಿ ಪ್ರತಿಭೆಗಳು ಅಖಾಡಕ್ಕೆ ಇಳಿದು ಪ್ರದರ್ಶಿಸಲಿದ್ದಾರೆ. ಕೆಲಸದ ಒತ್ತಡ ಟೆನ್ಷನ್‌ಗಳನ್ನ ಮರೆಸಿ ಮನಸಿಗೆ ಮುದನೀಡುವ ಮಕ್ಕಳ ಹಾಡುಗಳನ್ನು ಕೇಳಲು ನೋಡಲು ಮರೆಯದಿರಿ.

Leave a Reply

Your email address will not be published.

Social Media Auto Publish Powered By : XYZScripts.com