3 ವರ್ಷದ ದಾಂಪತ್ಯ ಜೀವನದಲ್ಲಿ ಒತ್ತಡ : ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವ ಬಾಲಿವುಡ್ ಜೋಡಿ

3 ವರ್ಷದ ದಾಂಪತ್ಯ ಜೀವನದ ನಂತರ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವ ನಿರ್ಮಾಪಕ ಮಧು ಮಂಟೇನ ಹಾಗೂ ಸ್ಟಾರ್ ಡಿಸೈನರ್ ಮಸಾಬ ಗುಪ್ತಾ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದಾರೆ.

25 ಆಗಸ್ಟ್ 2018 ರಿಂದ ತಾತ್ಕಾಲಿಕವಾಗಿ ಬೇರ್ಪಟ್ಟಿರುವ ಅವರು ಕೊನೆಗೂ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಚ್ಛೇದನ ವಿಷಯವನ್ನು ಅವರು ಈ ಮೊದಲು ತಿಳಿಸಿದ್ದರು.

ತಾವು ದೂರವಾಗಲು ಬಯಸುತ್ತಿದ್ದು, ನಮ್ಮ ದಾಂಪತ್ಯ ಜೀವನದ ಮೇಲೆ ಅಕಾರಣದಿಂದ ಒತ್ತಡವಾಗುತ್ತಿದೆ. ಜೊತೆಯಾಗಿರಲು ಕಷ್ಟವಾಗುತ್ತಿದೆ. ಅದಕ್ಕಾಗಿ ಮೊದಲು ದೂರವಾಗಿ ತಮ್ಮಿಬ್ಬರಿಗೆ ಏನು ಬೇಕೆಂದು ನೋಡಲು ನಿರ್ಧರಿಸುವುದಾಗಿ ತಿಳಿಸಿದ್ದರು.

ಇದೀಗ ಅವರು ನ್ಯಾಯಾಲಯಕ್ಕೆ ಹಾಜರಾಗುತ್ತಿರುವುದನ್ನು ನೋಡಿದರೆ ವಿಚ್ಛೇದನ ಬಹುತೇಕ ಖಚಿತವಾಗಿದೆ. ಮಸಾಬ ಗುಪ್ತ ಯಾವುದೇ ಜೀವನಾಂಶ ಕೇಳಿಲ್ಲವಂತೆ.

Leave a Reply

Your email address will not be published.

Social Media Auto Publish Powered By : XYZScripts.com