ಮಣಿಪಾಲ್ ಆಸ್ಪತ್ರೆಯಲ್ಲಿ ತೀರ್ವ ಉಸಿರಾಟದ ತೊಂದರೆಯಿಂದ ಮಾತೆ ಮಹಾದೇವಿ ಲಿಂಗೈಕ್ಯ..!

ಮಣಿಪಾಲ್ ಆಸ್ಪತ್ರೆಯಲ್ಲಿ ತೀರ್ವ ಉಸಿರಾಟದ ತೊಂದರೆಯಿಂದ ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದಾರೆ. ಇಂದು ಸಂಜೆ 4.45 ರ ಸುಮಾರಿಗೆ ಹೃದಯಾಘಾತ ಮತ್ತು ುಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಾತೆ ಮಹಾದೇವಿ ಕೊನೆಯುಸಿರೆಳಿದ್ದಿದ್ದಾರೆ.

ಬೆಂಗಳೂರು ರಾಜಾಜಿನಗರದಲ್ಲಿರುವ ಬಸವ ಮಂಟಪಕ್ಕೆ ಮಾತೆ ಮಹಾದೇವಿಯವರ ಪಾರ್ಥೀವ ಶರೀರವನ್ನು ರವಾನಿಸಲಾಗುತ್ತಿದ್ದು, ಮಂಟಪದ ಸುತ್ತಲು ಪೊಲೀಸ ಬಿಗಿ ಭದ್ರತೆ ಮಾಡಲಾಗಿದೆ.

ಬಸವಧರ್ಮದ ಪೀಠದ ಅಧ್ಯಕ್ಷೆ, ಅಭಿನವ ಅಕ್ಕಮಹಾದೇವಿ ಎಂದೇ ಹೆಸರು ಪಡೆದಿದ್ದ ಮಾತೆ ಮಹಾದೇವಿಯ ಜನ್ಮ ನಾಮ ರತ್ನ ತಮ್ಮ ಸಣ್ಣ ವಯಸ್ಸಿನಲ್ಲಿ ಧೀಕ್ಷೆ ಪಡೆದ ನಂತರ ಮಾತೆ ಮಹಾದೇವಿ ಯಾದರು. ಕಳೆದ ಮೂರು ದಿನಗಳ ಹಿಂದೆ ಅಷ್ಟೇ ಅವರು ಮಾತನಾಡಿದ್ದು. ಮಾರ್ಚ್ 13 ರಂದು ಅಂದರೆ ನಿನ್ನೆಯಷ್ಟೇ ಅವರ ಹುಟ್ಟುಹಬ್ಬ ಆಚರಿಸಿದ್ದರು ಅವರ ಅನುಯಾಯಿಗಳು. ಇಂದು ಅವರು ಕೊನೆಯುಸಿರೆಳೆದಿದ್ದಾರೆ.

ಬಸವಣ್ಣನ ತತ್ವಗಳನ್ನು ಸಾರುತ್ತಿದ್ದ ಮಾತೆ ಲಿಂಗಾಯತ ಧರ್ಮ ಪ್ರತ್ಯೇಕಕ್ಕೆ ಹೋರಾಟ ಮಾಡಿದವರು. ಕೂಡಲಸಂಗಮ ಅವರ ಧರ್ಮ ಕ್ಷೇತ್ರ ಎಂದು ಘೋಷಣೆ ಮಾಡಿದ್ದರು. ಸದ್ಯ ಮಾತೆ ನಮ್ಮನ್ನೆಲ್ಲ ಅಗಲಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಅವರ ಅಂತ್ಯಕ್ರಿಯೆಗೆ ನಿರ್ಧಾರ ಮಾಡಲಾಗಿದೆ.

 

 

 

 

Leave a Reply

Your email address will not be published.

Social Media Auto Publish Powered By : XYZScripts.com