ಎಚ್‍ಡಿಎಫ್‍ಸಿ ಬ್ಯಾಂಕ್ ಹುಬ್ಬಳ್ಳಿ ಪೊಲೀಸರ ನೆರವಿನೊಂದಿಗೆ `ಟ್ರಾಫಿಕ್ ಪಾಠಶಾಲಾ’

ಎಚ್‍ಡಿಎಫ್‍ಸಿ ಬ್ಯಾಂಕ್ ಹುಬ್ಬಳ್ಳಿ ಪೊಲೀಸರ ನೆರವಿನೊಂದಿಗೆ ನಗರದಲ್ಲಿ ರಸ್ತೆ ಸುರಕ್ಷತೆ ಉಪಕ್ರಮ `ಟ್ರಾಫಿಕ್ ಪಾಠಶಾಲಾ’ಗೆ ಸಹಯೋಗ ಹೊಂದಿದ್ದು ಹುಬ್ಬಳ್ಳಿ ರಸ್ತೆಗಳನ್ನು ಸುರಕ್ಷಿತಗೊಳಿಸಲು ರಸ್ತೆ ಸುರಕ್ಷತೆ ಬೇಕು ಮತ್ತು ಬೇಡಗಳ ಕುರಿತು ಅರಿವನ್ನು ಮೂಡಿಸಲಿದೆ.

ನಗರದ ಎಚ್‍ಡಿಎಫ್‍ಸಿ ಬ್ಯಾಂಕ್‍ನಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮವನ್ನು ಸಂಚಾರ ವಿಭಾಗದ ಪಿಐಗಳಾದ ಪ್ರಶಾಂತ ನಾಯಕ ಹಾಗೂ ಶ್ರೀನಿವಾಸ ಮೇಟಿ ಉದ್ಘಾಟಿಸಿದರು.
ಈ ಉಪಕ್ರಮದಿಂದ ಸುಮಾರು 4.5 ಲಕ್ಷ ಜನರಿಗೆ ಅನುಕೂಲವಾಗುವ ನಿರೀಕ್ಷೆಯಿದ್ದು, ಇದರಲ್ಲಿ ನಗರದ ಪ್ರಮುಖ ರಸ್ತೆ ತಿರುವುಗಳಾದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಈದ್ಗಾ ಮೈದಾನ, ಹುಬ್ಬಳ್ಳಿ ಹತ್ತಿ ಮಾರುಕಟ್ಟೆ, ಇಂದಿರಾ ಗಾಜಿನ ಮನೆ, ಹುಬ್ಬಳ್ಳಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಹುಬ್ಬಳ್ಳಿ ರೈಲ್ವೆ ನಿಲ್ದಾಣ, ಹುಬ್ಬಳ್ಳಿ ವಿಮಾನ ನಿಲ್ದಾಣಗಳ ವ್ಯಾಪ್ತಿ ಹೊಂದಿದೆ ಎಂದರು.

ಈ ಜಾಗೃತಿ ಮೂಡಿಸುವ ರ್ಯಾಲಿಯಲ್ಲಿ ಸ್ವಯಂಸೇವಕರ ಗುಂಪು ಮತ್ತು ಎಚ್‍ಡಿಎಫ್‍ಸಿ ಬ್ಯಾಂಕ್ ಉದ್ಯೋಗಿಗಳಿದ್ದು ಎಲ್ಲ ಪ್ರಮುಖ ಮತ್ತು ಒತ್ತಡದ ಟ್ರಾಫಿಕ್ ವೃತ್ತಗಳಲ್ಲಿ ಜನರಿಗೆ ರಸ್ತೆ ಸುರಕ್ಷತೆ ನಿಯಮಗಳನ್ನು ಅನುಸರಿಸಿ ಎಂದು ಹೇಳುವ ಸಂದೇಶಗಳನ್ನು ಹೊತ್ತ ಭಿತ್ತಿಪತ್ರ ಹಿಡಿದು ಸಂಚರಿಸಲಿದ್ದಾರೆ. ಟ್ರಾಫಿಕ್ ಶಿಸ್ತು ಅನುಸರಿಸುವ ಚಾಲಕರಿಗೆ ಸ್ವಯಂಸೇವಕರು ಪುರಸ್ಕಾರಗಳನ್ನು ನೀಡುವ ಮೂಲಕ ಅವರನ್ನು ಉತ್ತೇಜಿಸಲಿದ್ದಾರೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರನ್ನು `ಟ್ರಾಫಿಕ್ ಪಾಠಶಾಲಾ’ದಲ್ಲಿ ದಾಖಲಿಸಿಕೊಂಡು ಅವರಿಗೆ ರಸ್ತೆ ಸುರಕ್ಷತೆ ಯ ಬೇಕು ಮತ್ತು ಬೇಡಗಳ ಕುರಿತು ತಿಳಿವಳಿಕೆ ನೀಡುತ್ತಾರೆ ಎಂದು ಹೇಳಿದರು.

ಎಚ್‍ಡಿಎಫ್‍ಸಿ ಬ್ಯಾಂಕ್‍ನ ಬೆಳಗಾವಿ ಕರ್ನಾಟಕ ವೃತ್ತ-3ರ ಕ್ಲಸ್ಟರ್ ಹೆಡ್ ಸುನಿಲ್ ಎಸ್.ಹಾಲೆ ಪ್ಪನವರ್, ಎಚ್‍ಡಿಎಫ್‍ಸಿ ಬ್ಯಾಂಕ್ ಹುಬ್ಬಳ್ಳಿ ಮುಖ್ಯ ಶಾಖೆ ಮ್ಯಾನೇಜರ್ ವಿಜಯ್ ಪವಾರ್, ಧಾರವಾಡದ ಶಾಖಾ ಮ್ಯಾನೇಜರ್ ಗೋಪಿನಾಥ್ ಸರ್ವಾಡೆ ಮತ್ತು ಎಚ್‍ಡಿಎಫ್‍ಸಿ ಬ್ಯಾಂಕ್ ಮುಖ್ಯ ಶಾಖೆ ಮ್ಯಾನೇಜರ್ ಸಂಜೀವ್ ಪುರೋಹಿತ್ ಇದ್ದರು.

Leave a Reply

Your email address will not be published.

Social Media Auto Publish Powered By : XYZScripts.com