ಕಳ್ಳನ ಮನಸ್ಸು ಬದಲಿಸಿದ ಬ್ಯಾಂಕ್ ಬ್ಯಾಲೆನ್ಸ್ – ಚಾಕು ಹಿಡಿದು ಎಟಿಎಂಗೆ ಹೊಕ್ಕಿದ್ದ ಕಳ್ಳ

ಆಸೆಯೇ ದುಃಖಕ್ಕೆ ಮೂಲ ಎಂಬುದು ಈ ಕಳ್ಳನ ವಿಷಯದಲ್ಲೂ ನಿಜವಾಗಿದೆ. ಒಂದಷ್ಟು ಹಣ ದೋಚಿದ ಕಳ್ಳ ಮತ್ತಷ್ಟು ಸಿಕ್ಕೀತು ಎಂಬ ಆಸೆಯಿಂದ ದುಃಖಿತನಾಗಿದ್ದಲ್ಲದೆ ದೋಚಿದ ಹಣವನ್ನೂ ಮರಳಿಸಿ ಹೋಗಿದ್ದಾನೆ. ಈ ಕಾರಣಕ್ಕೆ ಕಳ್ಳನ ಬಗ್ಗೆ ಹಲವರು ಮೆಚ್ಚುಗೆ ಸೂಚಿಸಿದ್ದರೆ, ಅತ್ತ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಇಂಥದ್ದೊಂದು ಅಪರೂಪದ ಘಟನೆ ಚೀನಾದ ಹೆಯುವಾನ್ ಎಂಬಲ್ಲಿನ ಐಸಿಬಿಸಿ ಬ್ಯಾಂಕ್‍ನ ಎಟಿಎಂ ಕೇಂದ್ರದಲ್ಲಿ ನಡೆದಿದೆ. ಅಲ್ಲಿಗೆ ಲಿ ಎಂಬ ಮಹಿಳೆ ಹಣ ತೆಗೆಯಲು ಹೋಗಿದ್ದಾಗ, ಕಳ್ಳ ಆಕೆಯನ್ನು ಹಿಂಬಾಲಿಸಿದ್ದ. ಅವಳು ಒಳಗೆ ಹೋಗಿ 2500 ಯುವಾನ್ ಹಣ ಡ್ರಾ ಮಾಡುತ್ತಿದ್ದಂತೆ ಚಾಕು ಹಿಡಿದು ಒಳನುಗ್ಗಿದ ಕಳ್ಳ, ಅದನ್ನು ದೋಚಿಕೊಂಡಿದ್ದಾನೆ.
ಅಷ್ಟಕ್ಕೆ ಸುಮ್ಮನಾಗದ ಕಳ್ಳ ಚಾಕು ತೋರಿಸಿ ಬೆದರಿಸಿ ಬ್ಯಾಲೆನ್ಸ್ ತೋರಿಸಲು ಹೇಳಿದ್ದಾನೆ. ಮತ್ತಷ್ಟು ಹಣ ಸಿಗಬಹುದು ಎಂಬ ಆಸೆಯಲ್ಲಿದ್ದ ಅವನಿಗೆ ಆಗ ನಿರಾಶೆಯಾಗಿದೆ. ಮಹಿಳೆಯ ಖಾತೆಯಲ್ಲಿ ಬ್ಯಾಲೆನ್ಸ್ ನಿಲ್ ಇದ್ದಿದ್ದು ಕಂಡು ಬೇಸರಗೊಂಡಿದ್ದಾನೆ. ಅವಳ ಬಳಿ ಇನ್ನೇನೂ ಹಣ ಇಲ್ಲದ್ದನ್ನು ತಿಳಿದ ಕಳ್ಳ ಅವಳಿಂದ ದೋಚಿದ ಹಣವನ್ನೂ ವಾಪಸ್ ಕೊಟ್ಟು ಹೊರಟು ಹೋಗಿದ್ದ.

Leave a Reply

Your email address will not be published.

Social Media Auto Publish Powered By : XYZScripts.com