ಏಕದಿನ ವಿಶ್ವಕಪ್ ಕ್ರಿಕೆಟ್ : ಅಧಿಕೃತ ಪ್ರಾಯೋಜಕತ್ವ ಪಡೆದ ಗೋ-ಡ್ಯಾಡಿ ಸಂಸ್ಥೆ

ಇಂಗ್ಲೆಂಡ್ ನಲ್ಲಿ ನಡೆಯಲಿರುವ ಪುರುಷರ 2019 ಏಕದಿನ ವಿಶ್ವಕಪ್ ಕ್ರಿಕೆಟ್ ನ ಅಧಿಕೃತ ಪ್ರಾಯೋಜಕತ್ವವನ್ನು ಗೋ-ಡ್ಯಾಡಿ ಸಂಸ್ಥೆ ಪಡೆದುಕೊಂಡಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ತಿಳಿಸಿದೆ.

ಗೋ ಡ್ಯಾಡಿ ಸಿಕ್ಕ ದೊಡ್ಡ ಅವಕಾಶ ಬಳಿಸಿಕೊಳ್ಳಲು ಕಾತುರವಾಗಿದೆ. ವಿಶ್ವಕಪ್ ಪ್ರಸಾರ ಹೆಚ್ಚಿನ ಜನಕ್ಕೆ ತಲುಪುವಲ್ಲಿ ಸಂಸ್ಥೆ ನೆರವಾಗಲಿದೆ.

ಈ ಬಗ್ಗೆ ಮಾತನಾಡಿದ ಐಸಿಸಿಯ ಜನರಲ್ ಮ್ಯಾನೇಜರ್ ಕ್ಯಾಂಪ್ಬೆಲ್ ಜಮೈಸನ್, ಗೋ ಡ್ಯಾಡಿ ಸಂಸ್ಥೆ ಗೆ ಪ್ರಾಯೋಜಕತ್ವ ನೀಡಲು ಹರ್ಷವಾಗುತ್ತದೆ. ಭಾರತ ಹಾಗೂ ವಿಶ್ವದಲ್ಲೆಡೆ ಇದು ಹೆಸರು ಮಾಡಿದ್ದು, ಇದರ ಪ್ರಭಾವದಿಂದ ಉದ್ಯಮಿಗಳಿಗೆ ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ.

ಗೋ ಡ್ಯಾಡಿಯ ವ್ಯವಸ್ಥಾಪಕ ನಿರ್ದೇಶಕ, ಉಪಾಧ್ಯಕ್ಷ ನಿಖಿಲ್ ಆರೋರಾ ಮಾತನಾಡಿ, ಕ್ರಿಕೆಟ್ ಪ್ರೇಮಿಗಳು ವಿಶ್ವವ್ಯಾಪಿ ಇದ್ದು, ಡಿಜಿಟಲ್ ಮಾರುಕಟ್ಟೆಯ ಬಗ್ಗೆ ಅವರಿಗೆ ಅರಿವು ಮೂಡಿಸಬಹುದಾಗಿದೆ. ಭಾರತದಲ್ಲಿ ಕ್ರಿಕೆಟ್ ಖ್ಯಾತಿ ಪಡೆದ ಕ್ರೀಡೆ. ದೇಶದೆಲ್ಲೆಡೆ ಕ್ರಿಕೆಟ್ ಅಭಿಮಾನಿಗಳು ಸಿಗುತ್ತಾರೆ. ನಮ್ಮ ಸಂಸ್ಥೆ ಸಣ್ಣ ಉದ್ಯಮಿಗಳ ಕಲ್ಪನೆಗಳಿಗೆ ಬಣ್ಣ ತುಂಬುವ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com