ಮಹಿಳೆಯರು ಪ್ರತಿನಿತ್ಯ ಆರೋಗ್ಯವಂತರಾಗಿರಲು ಇವುಗಳನ್ನು ಫಾಲೋ ಮಾಡಿ..

ಪ್ರತಿನಿತ್ಯ ಹೆಲ್ತಿಯಾಗಿರಬೇಕು ಅನ್ನೋದು ಎಲ್ಲರ ಆಸೆ. ಅದ್ರಲ್ಲೂ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿ. ಮನೆ ಒಳಗು ಹೊರಗು ದುಡಿಯುವ ಮಹಿಳೆಗೆ ಎಷ್ಟು ಹೆಲ್ತ್ ಕಾಪಾಡಿಕೊಂಡ್ರು ಕಡಿಮೆನೇ.. ಹೀಗೆ ಬಯಸುವ ಮಹಿಳೆಯರಿಗೆ ನಾವು ಕೆಲವೊಂದಿಷ್ಟು ಟಿಪ್ಸ್ ಕೊಡ್ತಿವಿ ನೀವು ಫಾಲೋ ಮಾಡಿ.

ನುಗ್ಗೆ ಸೊಪ್ಪು – ಮುಟ್ಟು ನೋವು ನಿವಾರಣೆ ಮಾಡುತ್ತದೆ. ಪ್ರತಿನಿತ್ಯ ಖಾಲಿ ಹೊಟ್ಟೆಗೆ ಎರಡು ಸ್ಪೂನ್ ನಷ್ಟು ಜ್ಯೂಸ್ ಮಾಡಿ ಕುಡಿದರೆ ಒಳ್ಳೆದು.

ಪಾಲಕ್ – ಮೆದುಳನ್ನು ಹಾಳು ಮಾಡುವ ಬ್ಯಾಕ್ಟೇರಿಯಾಗಳನ್ನ ಕೊಲ್ಲಲು ಪಾಲಕ್ ಸಹಕಾರಿ, ಹೀಗಾಗಿ ನೀವು ಸೇವಿಸುವ ಆಹಾರದಲ್ಲಿ ಪಾಲಕ್ ಇರಲಿ.

ಸಬ್ಸಿಗೆ ಸೊಪ್ಪು – ಇದು ಋತು ಚಕ್ರ ಏರುಪೇರಾಗುವುದು ತಪ್ಪಿಸುತ್ತದೆ.

ಕರಿಬೇವಿನ ಎಲೆ – ಪಚನ ಕ್ರಿಯೆಗೆ ಕರಿಬೇವಿನ ಜ್ಯೂಸ್ ಒಳ್ಳೆದು. ವಾರಕ್ಕೆ ಎರಡು ಬಾರಿ ಅಧಿಕ ನೀರಿಗೆ ಎರಡು ಚಮಚದಷ್ಟು ಕರಿಬೇವಿನ ಜ್ಯೂಸ್ ವಿಶ್ರಣ ಮಾಡಿ ಸೇವಿಸಿದರೆ ಉತ್ತಮ.

ಕೊತ್ತಂಬರಿ ಸೊಪ್ಪು – ರಕ್ತದೊತ್ತಡ ಹತೋಟಿಗೆ ತರುತ್ತದೆ. ನಿತ್ಯ ಒಂದು ಚಮಚ ಜ್ಯೂಸ್ ಸಾಕು ರಕ್ತ ಸಂಚಲನ ಚೆನ್ನಾಗಿರಲು.

ಜೊತೆಗೆ ಮಹಿಳೆಯರು ಪ್ರತಿನಿತ್ಯ ಅಡುಗೆಯಲ್ಲಿ ತರಕಾರಿಗಳನ್ನು ಬಳಕೆ ಮಾಡುವುದನ್ನ ಮರಿಬೇಡಿ. ಆಹಾರ ಸೇವನೆ ನಂತರ ಹಣ್ಣುಗಳನ್ನು ಸೇವಿಸುವುದನ್ನ ರೂಢಿ ಮಾಡಿಕೊಂಡರೆ ಪ್ರತಿನಿತ್ಯ ನೀವು ಹೆಲ್ತಿಯಾಗಿರಬಹುದು. ಹೀಗಾಗಿ ಇದನ್ನ ಫಾಲೋ ಮಾಡಿ.

Leave a Reply

Your email address will not be published.

Social Media Auto Publish Powered By : XYZScripts.com