ಚುನಾವಣೆ ಕಣದಿಂದ ಹಿಂದೆ ಸರಿಯೋ ಮಾತೇ ಇಲ್ಲ : ಸುಮಲತಾ ಅಂಬರೀಶ್ ಸ್ಪಷ್ಟನೆ

ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಲೋಕಸಭಾ ಚುನಾವಣ ಕಣಕ್ಕಿಳಿಯುವುದು ಖಚಿತ. ಆದರೂ ಕೆಲ ಮಂದಿ ಸುಮಲತಾ ಚುನಾವಣೆ ಕಣದಿಂದ ಹಿಂದೆ ಸರಿಯುತ್ತಾರೆ ಎನ್ನುವ ಮಾತು ಕೇಳಿ ಬಂದಿದ್ದವು. ಇದರಿಂದ ಮಂಡ್ಯದ ಜನ ಸ್ವಲ್ಪ ಮಟ್ಟಿಗೆ ಗೊಂದಲಕ್ಕೊಳಗಾಗಿದ್ದು ನಿಜ. ತಮ್ಮ ಕ್ಷೇತ್ರದಿಂದ ಸುಮಲತಾ ಅವರು ಸ್ಪರ್ಧಿಸಬೇಕು ಅನ್ನೋದು ಬಹುಜನರ ಆಸೆ.

ಹೀಗಾಗಿ ಮಂಡ್ಯ ಜನರ ಋಣ ತೀರಿಸಲು ತಾವು ಮಂಡ್ಯದಲ್ಲಿ ಸ್ಪರ್ಧಿಸುವುದಾಗಿ ಸುಮಲತಾ ಒಪ್ಪಿಕೊಂಡಿದ್ದಾರೆ. ಈಗಲೂ ತಾವು ಸ್ಪರ್ಧಿಸುವುದು ಖಚಿತ. ಹೀಗಾಗಿ ಊಹಾಪೋಹಗಳಿಗೆ ಕಿವಿ ಕೊಡಬೇಡಿ ಎಂದು ಸುಮಲತಾ ಫೇಸ್ ಬುಕ್ ನಲ್ಲಿ  ಮಾಡಿದ್ದ ಹಿನ್ನೆಲೆಯಲ್ಲಿ ಸುಮಲತಾ ಸ್ಪಷ್ಟನೆ ನೀಡಿದ್ದಾರೆ.

ಫೇಸ್ ಬುಕ್ ನಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸುಮಲತಾ ಅಂಬರೀಶ್ ಆಕ್ರೋಶ್ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಜನರ ಋಣ ತೀರಿಸಲು ನಾನು ಬದ್ಧಳಾಗಿದ್ದೇನೆ. ಕೆಲ ಮಂದಿ ಮಂಡ್ಯ ಜನರ ಹಾದಿ ತಪ್ಪಿಸುತ್ತಿದ್ದಾರೆ. ಯಾವುದೇ ಊಹಾಪೋಹಾಗಳಿಗೆ ಯಾರೂ ಕೂಡ ಕಿವಿ ಕೊಡಬೇಡಿ ಎಂದು ತಿಳಿಸಿದ್ದಾರೆ.

ಈಗಾಗಲೇ ಒಂದು ಹಂತದ ಚುನಾವಣೆ ಪ್ರಚಾರ ಮಾಡಿದ ಸುಮಲತಾ 2ನೇ ಹಂತದ ಪ್ರಚಾರ ಮಾಡಲು ಸಿದ್ಧಗೊಳ್ಳುತ್ತಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com