ಚೀನಾದಲ್ಲಿ ದಂಗಾಗಿಸುವ ಸುದ್ದಿ..!: ಪಾರ್ಸಲ್ ಹೇಳಿದ್ದು ಡಕ್ ಡಿಶ್, ಮನೆಗೆ ಬಂದಿದ್ದು ಮಾತ್ರ ವಿಚಿತ್ರ..

ಆಹಾರದಲ್ಲಿ ಕೂದಲು, ಮನುಷ್ಯನ ಹಲ್ಲು, ಕಲ್ಲು ಸೇರಿದಂತೆ ಅನೇಕ ವಸ್ತುಗಳು ಸಿಕ್ಕಿರುವ ಸುದ್ದಿಗಳನ್ನು ಕೇಳಿರ್ತೀರಿ. ಸದ್ಯ ಚೀನಾದಲ್ಲಿ ದಂಗಾಗಿಸುವ ಸುದ್ದಿಯೊಂದು ಬಂದಿದೆ. ಆಹಾರದಲ್ಲಿ ಒಂದಲ್ಲ ಎರಡಲ್ಲ 40 ಜಿರಲೆ ಸಿಕ್ಕಿದೆ.

ಯಸ್, ಇದು ಸತ್ಯ. ಚೀನಾದ ಮಹಿಳೆಯೊಬ್ಬಳು ಆನ್ಲೈನ್ ನಲ್ಲಿ ಆಹಾರ ಆರ್ಡರ್ ಮಾಡಿದ್ದಾಳೆ. ಡಕ್ ಡಿಶ್ ಮನೆಗೆ ಪಾರ್ಸಲ್ ಬಂದಿದೆ. ಆಕೆ ಸ್ನೇಹಿತರ ಜೊತೆ ಸೇರಿ ಡಕ್ ಡಿಶ್ ಸೇವನೆಗೆ ಮುಂದಾಗಿದ್ದಾಳೆ. ಈ ವೇಳೆ ಡಿಶ್ ನಲ್ಲಿ ಸಣ್ಣ ಸಣ್ಣ ಹುಳುಗಳು ಕಾಣಿಸಿಕೊಂಡಿವೆ. ಸೂಕ್ಷ್ಮವಾಗಿ ನೋಡಿದಾಗ ಅದು ಜಿರಲೆ ಎಂಬುದು ಗೊತ್ತಾಗಿದೆ.

ಮಹಿಳೆ ಹಾಗೂ ಸ್ನೇಹಿತರು ಒಂದೊಂದೆ ಜಿರಲೆಯನ್ನು ತೆಗೆದು ಪೇಪರ್ ಮೇಲಿಟ್ಟಿದ್ದಾರೆ. ಲೆಕ್ಕ ಮಾಡಿದಾಗ 40 ಜಿರಲೆ ಸಿಕ್ಕಿದೆ. ಮಹಿಳೆ ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಬಗ್ಗೆ ತನಿಖೆ ಶುರುವಾಗಿದೆ. ಮಹಿಳೆ ಸ್ನೇಹಿತ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

 

Leave a Reply

Your email address will not be published.