ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್ಸ್ ನಲ್ಲಿ ಭಾರತ ಸೋಲು : ಟೂರ್ನಿಯಲ್ಲಿ ಅಭಿಯಾನ ಅಂತ್ಯ

ಭಾರತದ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರು ಇಲ್ಲಿ ನಡೆದಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ಸ್ ನಲ್ಲಿ ಸೋಲು ಕಂಡಿದ್ದಾರೆ.

 ಎಂಟರ ಘಟ್ಟದ ಪಂದ್ಯದಲ್ಲಿ ಶ್ರೀಕಾಂತ್ 12-21, 16-21 ರಿಂದ ವಿಶ್ವದ ನಂಬರ್ ಒನ್ ಆಟಗಾರ ಕೆಂಟೋ ಮೊಮೊಟ ವಿರುದ್ಧದ 44 ನಿಮಿಷದ ಕಾದಾಟದಲ್ಲಿ ಸೋಲು ಕಂಡರು. ಈ ಮೂಲಕ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ.

 ಈ ಇಬ್ಬರು ಆಟಗಾರರು, 14 ಬಾರಿ ಮುಖಾಮುಖಿಯಾಗಿದ್ದು, ಜಪಾನ್ ಆಟಗಾರ 11 ಬಾರಿ ಜಯ ಸಾಧಿಸಿದ್ದಾರೆ. ಉಭಯ ಆಟಗಾರರು ಆರಂಭದಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿದರು. ಶ್ರೀಕಾಂತ್ 9-9 ರಿಂದ ಪಂದ್ಯದಲ್ಲಿ ಸಮಬಲ ಸಾಧಿಸಿದ್ದರು. ಮೊಮೊಟ ಬಳಿಕ ಸಮಯೋಚಿತ ಆಟವಾಡಿ ಮೊದಲ ಗೇಮ್ ಗೆದ್ದು ಬೀಗಿದರು. ಎರಡನೇ ಗೇಮ್ ನಲ್ಲಿ ಮುನ್ನಡೆ ಕಾಯ್ದುಕೊಂಡ ವಿಶ್ವ ನಂಬರ್ ಒನ್ ಆಟಗಾರ ಅರ್ಹ ಗೆಲುವು ಸಾಧಿಸಿ ಸೆಮಿಫೈಲ್ಸ್‍ ಗೆ ಲಗ್ಗೆ ಇಟ್ಟರು.

Leave a Reply

Your email address will not be published.

Social Media Auto Publish Powered By : XYZScripts.com