ಸಮುದ್ರದಲ್ಲಿ ಬಿದ್ದ ನಾವಿಕ 20 ಮೈಲು ತೇಲಿದ್ದು ಹೇಗೆ? ಯಾರಿಗಾಗಿ..?

ನೀರಿನಲ್ಲಿ 20 ಮೈಲುಗಳ ದೂರ ತೇಲಿಕೊಂಡು ಜರ್ಮನ್ ನಾವಿಕನೊಬ್ಬ ಬದುಕುಳಿದಿದ್ದಾನೆ. ನ್ಯೂಜಿಲ್ಯಾಂಡ್ ನ ಪೂರ್ವ ಸಮುದ್ರದಲ್ಲಿ ಅಕ್ಲ್ಯಾಂಡ್ ನಿಂದ ಬ್ರೆಜಿಲ್ ಗೆ ವಿಹಾರ ನೌಕೆಯಲ್ಲಿ ಜರ್ಮನ್ ನಾವಿಕ ಆರ್ನೆ ಮುರ್ಕೆ (30) ತನ್ನ ಸಹೋದರನೊಂದಿಗೆ ಸಾಗುತ್ತಿದ್ದಾಗ ಆತನ ಬೋಟು ಸಮುದ್ರದ ಅಲೆಗೆ ಪಲ್ಟಿ ಹೊಡೆದಿದೆ.

ಈತನ ಸಹೋದರ ಲೈಫ್ ಜಾಕೆಟ್ ಎಸೆದರೂ ಅದನ್ನು ಹಿಡಿದುಕೊಳ್ಳಲು ವಿಫಲನಾಗಿದ್ದು, ಇದರಿಂದಾಗಿ ನೀರಿಗೆ ಬಿದ್ದ ಮುರ್ಕೆ ಸುಮಾರು ಮೂರುವರೆ ಗಂಟೆಗಳ ಕಾಲ ಹರ ಸಾಹಸ ನಡೆಸಿ ಬದುಕಿ ಉಳಿದಿದ್ದಾನೆ. ತನ್ನ ಜೀನ್ ಪ್ಯಾಂಟ್ ನ್ನ ಅನೇಕ ಗಂಟುಗಳನ್ನಾಗಿ ಮಾಡಿಕೊಂಡು ಲೈಫ್ ಜಾಕೆಟ್ ತರಹ ರೂಪಿಸಿಕೊಂಡ ಮುರ್ಕೆ ನೀರಿನ ಹೊಡೆತವನ್ನ ತಡೆದು ಬದುಕುಳಿದಿದ್ದಾನೆ.

ನನ್ನ ಮಗಳು ತಂದೆಯಿಲ್ಲದೆ ಬದುಕಬಾರದು ಎಂಬ ಧೃಢ ಸಂಕಲ್ಪದಿಂದ ನೀರಿನಲ್ಲಿ ನಡೆದ ಅವಘಡವನ್ನ ಎದುರಿಸಲು ಸ್ಪೂರ್ತಿಯಾಗಿದೆ ಎಂದು ಮುರ್ಕೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾನೆ.

 

Leave a Reply

Your email address will not be published.

Social Media Auto Publish Powered By : XYZScripts.com