Election 2019 : ಮತ್ತೆ Modi ಗೆಲ್ಲಲು ಈ 9 ರಾಜ್ಯಗಳಲ್ಲಿ ಬಂಪರ ಬೆಳೆ ಬರಲೇಬೇಕು..

ಐದು ವರ್ಷಗಳ ಹಿಂದೆ ಬಹುಮತದೊಂದಿಗೆ ದಿಲ್ಲಿ ಕೋಟೆ ಪ್ರವೇಶಿಸಿದ್ದ ನರೇಂದ್ರ ಮೋದಿ ಈ ಬಾರಿ ಗದ್ದುಗೆ ಉಳಿಸಿಕೊಳ್ಳಲಿದ್ದಾರೆಯೇ? ಹಾಗಿದ್ದರೇ ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು ಎಂಬುದು ಈಗ ಚರ್ಚಿತ ವಿಷಯವಾಗಿದೆ.

ಸ್ವಂತಬಲದ ಮೇಲೆ ಬಹುಮತ ಪಡೆದು ದಿಲ್ಲಿ ಗದ್ದುಗೆ ಏರಿದ್ದ ಬಿಜೆಪಿ ಮತ್ತೊಮ್ಮೆ ಅದೇ ಪ್ರದರ್ಶನ ನೀಡಬೇಕು ಎಂದಾದಲ್ಲಿ ಒಂಬತ್ತು ರಾಜ್ಯಗಳಲ್ಲಿ ಫಲಿತಾಂಶ ನಿರ್ಣಾಯಕವೆನಿಸಲಿದೆ.

ಹಾಗಾದರೆ ಬಿಜೆಪಿಯ ಭವಿಷ್ಯ ನಿರ್ಧರಿಸಲಿರುವ ಆ ಒಂಬತ್ತು ರಾಜ್ಯಗಳಾದರೂ ಯಾವುದು ಎಂದರೆ ಅವು ಉತ್ತರಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಛತ್ತೀಸ್‌ಗಢ, ಬಿಜಾರ, ಜಾರ್ಖಂಡ್, ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಾಸ್ಥಾನಗಳಾಗಿವೆ.

ಈ ರಾಜ್ಯಗಳಲ್ಲಿ ಒಟ್ಟು 278 ಲೋಕಸಭಾ ಸ್ಥಾನಗಳಿದ್ದು, 2014ರ ಚುನಾವಣೆಯಲ್ಲಿ ಬಿಜೆಪಿ ಇವುಗಳನ್ನು ಗುಡಿಸಿ ಗುಂಡಾಂತರ ಮಾಡಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಬಹುಮತದ ಬಹುಪಾಲು ಸ್ಥಾನ ಈ ಒಂಬತ್ತು ರಾಜ್ಯಗಳಿಂದಲೇ ಆಕರವಾಗಿತ್ತು ಎಂಬುದು ಗಮನಾರ್ಹ ಸಂಗತಿ.

2014 ಚುನಾವಣೆಯಲ್ಲಿ ಬಿಜೆಪಿಯು ಈ ಒಂಬತ್ತು ರಾಜ್ಯಗಳಲ್ಲಿ ಬರೋಬ್ಬರಿ 221 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು ಎಂದರೆ ಇಲ್ಲಿನ ಮತದಾರರ ಮೇಲೆ ಮೋದಿ ಮೋಡಿ ಯಾವ ಪ್ರಮಾಣದಲ್ಲಿ ಇತ್ತು ಎಂಬುದು ವೇದ್ಯವಾಗುತ್ತದೆ.

ಈ ಬಾರಿ ಉತ್ತರಪ್ರದೇಶದಲ್ಲಿ ಮಾಯಾವತಿ ಹಾಗೂ ಅಖಿಲೇಶರ ಪಕ್ಷಗಳು ಪರಸ್ಪರ ಮೈತ್ರಿ ಮಾಡಿಕೊಂಡಿದ್ದು, ಅಲ್ಲಿ ಗೆಲ್ಲುವುದು ಬಿಜೆಪಿಗೆ ಸವಾಲಿನ ವಿಷಯವೇ ಆಗಿದೆ.

ಮಧ್ಯಪ್ರದೇಶ, ರಾಜಾಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದದ್ದರೆ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಮತ್ತೆ ಒಂದಾಗಿವೆ. ಬಿಹಾರದಲ್ಲಿ ನಿತೀಶ್‌ರನ್ನು ಸೆಳೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದರೂ ಮಹಾಘಟಬಂಧನದ ಪ್ರಬಲ ಸವಾಲು ಎದುರಿಸಬೇಕಿದೆ.

Leave a Reply

Your email address will not be published.

Social Media Auto Publish Powered By : XYZScripts.com