ಭರ್ಜರಿ ಬೌಲಿಂಗ್ ನಿಂದ ಮುನ್ನಡೆ ಸಾಧಿಸಿದ ನೀಲ್ ವ್ಯಾಗ್ನರ್, ಟ್ರೆಂಟ್ ಬೌಲ್ಟ್‍..

ಭರವಸೆಯ ಬೌಲರ್ ನೀಲ್ ವ್ಯಾಗ್ನರ್ (45ಕ್ಕೆ 5) ಹಾಗೂ ಟ್ರೆಂಟ್ ಬೌಲ್ಟ್‍  (52ಕ್ಕೆ 4) ಅವರ ಭರ್ಜರಿ ಬೌಲಿಂಗ್ ನೆರವಿನಿಂದ ಎರಡನೇ ಟೆಸ್ಟ್‍ ನಲ್ಲಿ ನ್ಯೂಜಿಲೆಂಡ್ ಇನ್ನಿಂಗ್ಸ್ ಹಾಗೂ 12 ರನ್ ಗಳಿಂದ ಬಾಂಗ್ಲಾದೇಶವನ್ನು ಮಣಿಸಿ, 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

3 ವಿಕೆಟ್ ಗೆ 80 ರನ್ ಗಳಿಂದ ಆಟ ಮುಂದುವರಿಸಿದ ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್ ನಲ್ಲಿ 209 ರನ್ ಗಳಿಗೆ ಸರ್ವಪತನ ಹೊಂದಿತು.

ಬಾಂಗ್ಲಾ ಪರ ಇನ್ನಿಂಗ್ಸ್ ಆರಂಭಿಸಿದ ಮೊಹಮ್ಮದ್ ಮಿಥುನ್ (47) ಹಾಗೂ ಸೌಮ್ಯ ಸರ್ಕಾರ್ (28) ತಂಡಕ್ಕೆ ನೆರವಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದುಲ್ಲ 69 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 67 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಉಳಿದಂತೆ ಬೇರೆ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು.

ನ್ಯೂಜಿಲೆಂಡ್ ಪರ ವೇಗಿ ಟ್ರೆಂಟ್ ಬೌಲ್ಟ್ 16 ಓವರ್ ಗಳಲ್ಲಿ 52 ರನ್ ನೀಡಿ 4 ವಿಕೆಟ್ ಪಡೆದರೆ, ವ್ಯಾಗ್ನಾರ್ 14 ಓವರ್ ಗಳಲ್ಲಿ 45 ರನ್ ನೀಡಿ ಐದು ಪ್ರಮುಖ ವಿಕೆಟ್ ಕಬಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com