ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ದಾಖಲೆ : ಕಿಚ್ಚನ ‘ಬಿಲ್ಲ ರಂಗ ಬಾಷ’ ಚಿತ್ರದ ಬಜೆಟ್ ಕೇಳಿ ಶಾಕ್ ಆಗ್ಬೇಡಿ..

ಕಿಚ್ಚ ಸುದೀಪ್ ಸೌತ್ ಸಿನಿ ಇಂಡಸ್ಟ್ರಿಯ ಬ್ಯುಸಿಯಸ್ಟ್ ನಟ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲದೆ ತೆಲುಗು ಮತ್ತು ಬಾಲಿವುಡ್ ಸಿನಿಮಾಗಳಲ್ಲು ಅಭಿನಯಿಸುತ್ತಿದ್ದಾರೆ. ಸುದೀಪ್ ಅಭಿನಯದ ಮುಂದಿನ ಸಿನಿಮಾ ‘ಬಿಲ್ಲ ರಂಗ ಬಾಷ’ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸುದ್ದು ಮಾಡುತ್ತಿದೆ.

ಕೇವಲ ಟೈಟಲ್ ಮೂಲಕವೇ ಅಭಿಮಾನಿಗಳ ನಿದ್ದೆ ಗೆಡಿಸಿದ್ದ ‘ಬಿಲ್ಲ ರಂಗ ಬಾಷ’ ಚಿತ್ರದಿಂದ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಹೊರಬಿದ್ದಿದೆ. ಈಗಾಗಲೇ ಅಭಿನಯ ಚಕ್ರವರ್ತಿ ಸುದೀಪ್ ಅಭಿಮಾನಿಗಳು ‘ಬಿಲ್ಲ ರಂಗ ಬಾಷ’ನ ಜಪ ಮಾಡುತ್ತಿದ್ದಾರೆ.

ಅದರ ಜೊತೆಗೀಗ ಬಜೆಟ್ ವಿಷಯವಾಗಿ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ದಾಖಲೆ ಬರೆಯಲು ಹೊರಟಿದೆ. ಹೌದು, ಮೂಲಗಳ ಪ್ರಕಾರ ಈ ಸಿನಿಮಾದ ಬಜೆಟ್ ಬರೊಬ್ಬರಿ 75 ಕೋಟಿಗೂ ಅಧಿಕ ಇರಲಿದೆಯಂತೆ. ಅಂದ ಮೇಲೆ, ಸುದೀಪ್ ಸಿನಿಮಾ ಲಿಸ್ಟ್ ಗಳಲ್ಲಿಯೇ ‘ಬಿಲ್ಲ ರಂಗ ಬಾಷ’ ದೊಡ್ಡ ಮೊತ್ತದ ಸಿನಿಮಾವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com