ಆಕಾಶ್ ಅಂಬಾನಿ ವಿವಾಹದ ಸ್ವಾರಸ್ಯಕರ ಸಂಗತಿ : ಐಶ್ವರ್ಯಾ ರೈ, ಪ್ರಿಯಾಂಕ ಚೋಪ್ರಾ ನೃತ್ಯ

ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ, ಶ್ಲೋಕಾ ಮೆಹ್ತಾ ವಿವಾಹ ಪೂರ್ಣಗೊಂಡರೂ ಅಲ್ಲಿನ ಸ್ವಾರಸ್ಯಕರ ಸಂಗತಿಗಳ ಚರ್ಚೆಗೆ ವಿರಾಮ ಸಿಕ್ಕಿಲ್ಲ‌.

ಹೌದು, ಜಿಯೋ ವರ್ಲ್ಡ್‌ ನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಬಾಲಿವುಡ್ ಭಾರಿ‌ ಬೇಡಿಕೆಯ ನಟಿಯರಾದ ಐಶ್ವರ್ಯಾ ರೈ ಹಾಗೂ ಪ್ರಿಯಾಂಕ ಚೋಪ್ರಾ ಒಂದೇ ವೇದಿಕೆಯಲ್ಲಿ ಬಾಲಿವುಡ್ ಹಾಡೊಂದಕ್ಕೆ ಸ್ಟೆಪ್ ಹಾಕಿರುವುದು ಇದೀಗ ವೈರಲ್ ಆಗಿದೆ.

ಆರಂಭದಲ್ಲಿ ಐಶ್ವರ್ಯಾ ಒಬ್ಬರೇ ನೃತ್ಯ ಮಾಡುತ್ತಿದ್ದು, ಅಭಿಷೇಕ್ ಬಚ್ಚನ್ ಗಣ್ಯರನ್ನು ವೇದಿಕೆಗೆ ಕರೆಯುತ್ತಿದ್ದಾರೆ. ಈ ವೇಳೆ ರೈಗೆ ಪ್ರಿಯಾಂಕಾ ಚೋಪ್ರಾ ಜತೆಗೂಡಿ ಹೆಜ್ಜೆ ಹಾಕಿದ್ದಾರೆ. ಇವರಿಬ್ಬರ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ಕರಣ್ ಜೋಹರ್ ಒಂದಾಗಿ ಸ್ಟೆಪ್ ಹಾಕಿರುವುದು ನೆರೆದಿದ್ದವರಿಗೆ ಮತ್ತಷ್ಟು ಮನೋರಂಜನೆ ನೀಡಿದೆ‌.

ಇನ್ನು ಇಲ್ಲಿಯವರೆಗೆ ಒಂದೇ ಚಿತ್ರ ಅಥವಾ ವೇದಿಕೆಯಲ್ಲಿ ಕಾಣಿಸಿಕೊಳ್ಳದ ರೈ-ಚೋಪ್ರಾ‌ ಅವರ ಈ ಡಾನ್ಸ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published.