‘ಸುಮಲತಾರ ಪರ ಚುನಾವಣಾ ಪ್ರಚಾರಕ್ಕೆ ದರ್ಶನ್ ಇರಬೇಕಾದರೆ ನಾನ್ಯಾಕೆ’ ಎಂದ ಸುದೀಪ್..

ಸುಮಲತಾ ಅವರ ಪರ ನಾನು ಪ್ರಚಾರ ಮಾಡುವುದಿಲ್ಲ ಎಂದಿದ್ದಾರೆ ಸುದೀಪ್…

ಲೋಕಸಭಾ ಚುನಾವಣೆ ರಂಗು ದಿನೇ ದಿನೇ ಬದಲಾಗುತ್ತಾ ಹೋಗ್ತಾಯಿದೆ. ಅದರಲ್ಲೂ ಮಂಡ್ಯದಲ್ಲಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರ ವಿಚಾರಕ್ಕೆ ಸಾಕಷ್ಟು ಪರ ವಿರೋಧ ಹೇಳಿಕೆಗಳನ್ನಾಡುತ್ತಿರುವುದು ಕಂಡುಬರುತ್ತಿವೆ. ನಿನ್ನೆಯಷ್ಟೇ ಸಚಿವ ರೇವಣ್ಣ ಅವರು ‘ ಪತಿ ಸತ್ತು ಇಷ್ಟು ಬೇಗ ರಾಜಕಾರಣಕ್ಕೆ ಬರುತ್ತಿದ್ದಾರೆ’ ಎನ್ನುವ ಹೇಳಿಕೆ ಜೊತೆಗೆ ‘ ಸಿನಿಮಾದಲ್ಲಿ ಕಣ್ಣೀರಿನ ಅಭಿನಯ ರಾಜಕೀಯದಲ್ಲೂ ಮಾಡಲು ಹೊರಟಿದ್ದಾರೆ’ ಎನ್ನುವ ಹೇಳಿಕೆ ಮಾತ್ರ ಮಂಡ್ಯದ ಅಂಬಿ ಅಭಿಮಾನಗಳ ಮನದಲ್ಲಿ ರೋಷ ಹುಟ್ಟುಹಾಕಿತ್ತು.

ಆದರೀಗ ಸುಮಲತಾ ಅವರ ಲೋಕಸಭಾ ಚುನಾವಣೆ ಸ್ಪರ್ಧೆಗೆ ಬೆಂಗಾವಲಾಗಿ ಕನ್ನಡ ಚಿತ್ರರಂಗದ ಸ್ಟಾರ್ ಗಳು ನಿಲ್ತಾರೆ ಅನ್ನೋ ನಂಬಿಕೆ ಹುಟ್ಟುವಾಗಲೇ ಸುದೀಪ್ ಪ್ರಚಾರದಲ್ಲಿ ತಾಔಉ ಭಾಗಿಯಾಗುವುದಿಲ್ಲ ಎನ್ನುವ ಮಾತನ್ನಾಡಿದ್ದಾರೆ. ಸುಮಲತಾ ಪರ ಪ್ರಚಾರಕ್ಕೆ ದರ್ಶನ್ ಸಿದ್ಧವಾಗಿದ್ದಾರೆ. ಆದರೆ ಇದೇ ರೀತಿ ಸುದೀಪ್ ಕೂಡ ಪ್ರಚಾರ ಮಾಡುತ್ತಾರೆ ಎನ್ನುವ ಯೋಚನೆ ಎಲ್ಲರಲ್ಲಿತ್ತು. ಆದರೆ ಈ ವಿಚಾರವಾಗಿ ಸುದೀಪ್ ನೋ ಎಂದಿದ್ದಾರೆ.

‘ದರ್ಶನ್ ಸುಮಲತಾ ಅವರ ಪರ ಪ್ರಚಾರಕ್ಕೆ ಇರುವಾಗ ನಾನ್ಯಾಕೆ..? ಅಂಬರೀಶ್ ಎನ್ನುವ ಹೆಸರೇ ಸಾಕು… ‘ ಎಂದಿದ್ದಾರೆ ಸುದೀಪ್ . ಸದ್ಯ ಈ ಹೇಳಿಕೆ ಭಾರೀ ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಕೋಟಿಕೊಬ್ಬ 3 ಶೂಟಿಂಗ್ ನಲ್ಲಿ ಬ್ಯೂಸಿಯಾಗಿರುವ ಸುದೀಪ ರಾಜಕೀಯದ ಬಗ್ಗೆ ಒಲವು ಕಡಿಮೆ, ತಾವು ನಿರ್ದೇಶಕರ ಪರ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com