ಸಾಹಿತ್ಯ, ಗಾಯನದಲ್ಲಿ ಹೊಸ ವಿಡಿಯೋ ಹಾಡನ್ನು ಹೊರತರಲು ಮುಂದಾದ ರಾಪಿಡ್ ರಶ್ಮಿ

ಬಿಗ್ ಬಾಸ್ ಕನ್ನಡ-6′ ಕಾರ್ಯಕ್ರಮದಲ್ಲಿ ಗಮನ ಸೆಳೆದ ಸ್ಪರ್ಧಿಗಳ ಪೈಕಿ ರಾಪಿಡ್ ರಶ್ಮಿ ಕೂಡ ಒಬ್ಬರು. ಬಾಯಿ ತೆಗೆದರೆ ಪಟ ಪಟ ಅಂತ ಮಾತನಾಡುವ ರಾಪಿಡ್ ರಶ್ಮಿ ಆರ್.ಜೆ ಅಂತ ಎಲ್ಲರಿಗೂ ಗೊತ್ತಿತ್ತು. ಆದ್ರೆ ರಾಪಿಡ್ ರಶ್ಮಿ ಉತ್ತಮ ಸಿಂಗರ್ ಕೂಡ ಹೌದು ಅನ್ನೋದು ‘ಬಿಗ್ ಬಾಸ್’ ಮನೆಯಲ್ಲಿ ಸಾಬೀತಾಗಿತ್ತು.

ಗಾಯಕ ಮತ್ತು ಸಂಗೀತ ಸಂಯೋಜಕ ನವೀನ್ ಸಜ್ಜು ಜೊತೆಗೂಡಿ ‘ಬಿಗ್ ಬಾಸ್’ ಮನೆಯಲ್ಲಿ ರಾಪಿಡ್ ರಶ್ಮಿ ಗಾನಸುಧೆಯನ್ನು ಹರಿಸುತ್ತಿದ್ದರು. ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿರುವ ರಾಪಿಡ್ ರಶ್ಮಿಯ ಗಾಯನ ಕೇಳಿ ಕಿಚ್ಚ ಸುದೀಪ್ ಕೂಡ ಬೆರಗಾಗಿದ್ದರು.

ಇದೀಗ ‘ಬಿಗ್ ಬಾಸ್’ ಕಾರ್ಯಕ್ರಮ ಮುಗಿದ ಮೇಲೆ ರಾಪಿಡ್ ರಶ್ಮಿ ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ತಮ್ಮದೇ ಸಾಹಿತ್ಯ ಹಾಗೂ ಗಾಯನದಲ್ಲಿ ಹೊಸ ವಿಡಿಯೋ ಹಾಡನ್ನು ಹೊರತರಲು ರಾಪಿಡ್ ರಶ್ಮಿ ಮುಂದಾಗಿದ್ದಾರೆ.

ಸದ್ಯಕ್ಕೆ ಹಾಡಿನ ಸಾಹಿತ್ಯ ರೆಡಿ ಇದ್ದು, ಗಾಯನವನ್ನು ಮಾಡಿ ಮುಗಿಸಿದ್ದಾರೆ ರಾಪಿಡ್ ರಶ್ಮಿ. ಹಾಡಿನ ಚಿತ್ರೀಕರಣ ಇನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಮಾರ್ಚ್ ಅಂತ್ಯದ ವೇಳೆಗೆ ‘ಇಂಡಿಪೆಂಡೆಂಟು’ ನಿಮ್ಮ ಕಣ್ ಮುಂದೆ ಬರಲಿದೆ.

Leave a Reply

Your email address will not be published.

Social Media Auto Publish Powered By : XYZScripts.com