ಪ್ರಭಾಸ್ ‘ಸಾಹೋ’ ಚಿತ್ರದ ಒಂದು ದೃಶ್ಯಕ್ಕೆ 30 ಕೋಟಿ ರೂಪಾಯಿನಾ..?

ಬಾಹುಬಲಿ ಯಶಸ್ಸಿನ ನಂತ್ರ ಪ್ರಭಾಸ್, ಸಾಹೋ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಪ್ರಭಾಸ್ ಅಭಿನಯದ ಸಾಹೋ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಚಿತ್ರವನ್ನು 300 ಕೋಟಿ ವೆಚ್ಛದಲ್ಲಿ ನಿರ್ಮಾಣ ಮಾಡಲಾಗ್ತಿದೆ. ಚಿತ್ರ ಆಗಸ್ಟ್ 15ರಂದು ತೆರೆಗೆ ಬರಲಿದೆ.

ಚಿತ್ರದ ಬಗ್ಗೆ ಇನ್ನೊಂದು ಸುದ್ದಿ ಹೊರ ಬಿದ್ದಿದೆ. ಚಿತ್ರದ ಒಂದು ದೃಶ್ಯಕ್ಕೆ 30 ಕೋಟಿ ರೂಪಾಯಿ ಖರ್ಚು ಮಾಡಲಾಗ್ತಿದೆ. ಸಾಹೋ ಚಿತ್ರದ ಇಂಟರ್ವಲ್ ದೃಶ್ಯ ತುಂಬಾ ವಿಶೇಷವಾಗಿರಲಿದೆಯಂತೆ. ಇದಕ್ಕೆ 30 ಕೋಟಿ ರೂಪಾಯಿ ಖರ್ಚು ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.

ಆ್ಯಕ್ಷನ್ ಸಿನಿಮಾ ಸಾಹೋದ ಕೆಲ ದೃಶ್ಯಗಳ ಚಿತ್ರೀಕರಣ ಅಬುದಾಬಿಯಲ್ಲಿ ನಡೆದಿದೆ. ಸುಮಾರು 90 ಕೋಟಿ ರೂಪಾಯಿ ಖರ್ಚು ಮಾಡಿ ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈಗ ಇಂಟರ್ವಲ್ ದೃಶ್ಯದ ಶೂಟಿಂಗ್ ಹೈದ್ರಾಬಾದ್ ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ. ಚಿತ್ರದಲ್ಲಿ ಪ್ರಭಾಸ್ ಜೊತೆ ಶ್ರದ್ಧಾ ಕಪೂರ್, ನೀಲ್ ನಿತಿನ್ ಮುಕೇಶ್, ಜಾಕಿಶ್ರಾಫ್ ಸೇರಿದಂತೆ ಅನೇಕ ಕಲಾವಿದರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com