‘ಗೋಬ್ಯಾಕ್ ನಿಖಿಲ್’ ಕ್ಯಾಂಪೇನ್ ನಡೆಸಿದವರ ಮೇಲೆ ಖಾಕಿ ಕಣ್ಣು : ಪತ್ತೆದಾರಿಕೆಗೆ ಸಿಎಂ ಸೂಚನೆ

‘ಗೋಬ್ಯಾಕ್ ನಿಖಿಲ್’ ಕ್ಯಾಂಪೇನ್ ನಡೆಸಿದವರನ್ನ ಪತ್ತೆ ಮಾಡಲು ಗುಪ್ತಚರ ಇಲಾಖೆಗೆ ಸಿಎಂ ನೀಡಿದ್ದಾರೆ. ಕೆಲವು ದಿನಗಳಿಂದೆ ಮಂಡ್ಯ ಕ್ಷೇತ್ರದಿಂದ ಅದೂ ಸುಮಲತಾ ವಿರುದ್ಧವಾಗಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ ಎನ್ನುವ ವಿಷಯ ಖಚಿತ ಪಡಿಸಿಕೊಂಡ ಕೆಲ ಜನ ಸಾಮಾಜಿಕ ಜಾಲತಾಣಗಳಲ್ಲಿ ‘ಗೋಬ್ಯಾಕ್ ನಿಖಿಲ್’ ಕ್ಯಾಂಪೇನ್ ನಡೆಸಿದ್ದಾರೆ.

ಈ ಕೆಲಸ ಮಾಡುತ್ತಿರುವ ವ್ಯಕ್ತಿ ಯಾರು..? ಯಾವ ಪಕ್ಷದವರು..? ಜೆಡಿಎಸ್ ಕಾರ್ಯಕರ್ತರಾ..? ಎನ್ನುವ ವಿಚಾರದ ಪತ್ತೆದಾರಿಕೆಗೆ ಸಿಎಂ ತಿಳಿಸಿದ್ದಾರೆ.

ಪಕ್ಷಕ್ಕೆ ಮುಜುಗರು ಉಂಟು ಮಾಡುತ್ತಿರುವವರನ್ನು ಪತ್ತೆ ಮಾಡಿ ಅವರ ಭಾವಚಿತ್ರ ಹಾಗೂ ಅವರ ವಿಳಾಸ ನೀಡಲು ಸಿಎಂ ತಿಳಿಸಿದ್ದಾರೆ ಎನ್ನಲಾಗಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com