ಲಂಡನ್ ನಲ್ಲಿ ವ್ಯಾಸಂಗ ಮುಗಿದ ಬಳಿಕ ಶಾರುಕ್ ಖಾನ್ ಪುತ್ರಿ ಸುಹಾನ ಚಿತ್ರರಂಗಕ್ಕೆ ಪ್ರವೇಶ..!

ಎಲ್ಲರ ಗಮನ ಸೆಳೆಯುತ್ತಿರುವ ಸ್ಟಾರ್ ಕಿಡ್ ಗಳ ಪೈಕಿ ಶಾರುಕ್ ಖಾನ್ ಪುತ್ರಿ ಸುಹಾನ ಖಾನ್ ಮುಂಚೂಣಿಯಲ್ಲಿದ್ದಾರೆ. ಸದ್ಯ ಲಂಡನ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಸುಹಾನ ಶೀಘ್ರದಲ್ಲೇ ಬಾಲಿವುಡ್ ಗೆ ಪಾದಾರ್ಪಣೆ ಮಾಡಬಹುದೆಂಬ ಮಾತುಗಳು ಕೇಳಿಬರುತ್ತಿವೆ.

ಇದಕ್ಕೆ ಪುಷ್ಟಿ ನೀಡುವಂತೆ ಸುಹಾನ, ಶಾರುಕ್ ಅಭಿನಯದ ‘ಜೀರೋ’ ಚಿತ್ರದಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದರು. ಲಂಡನ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಸುಹಾನ ತಮ್ಮ ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಚಿತ್ರರಂಗ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆಂದು ಹೇಳಲಾಗಿದೆ.

ಕಳೆದ ಬಾರಿ ಸುಹಾನ ತನ್ನ ಕಾಲೇಜಿನ ನಾಟಕವೊಂದರಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಕ್ಕೆ ತಾಲೀಮು ನಡೆಸಿದ್ದರು. ಇದೀಗ ಸುಹಾನ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಸುಹಾನ ತಮ್ಮ ಸಹಪಾಠಿಗಳೊಂದಿಗೆ ನೃತ್ಯಾಭ್ಯಾಸ ನಡೆಸುತ್ತಿದ್ದಾರೆ. ಕಾಲೇಜಿನ ಸಮಾರಂಭವೊಂದಕ್ಕೆ ಸುಹಾನ ಈ ತಯಾರಿ ನಡೆಸಿದ್ದು, ಮುಂದೆ ಚಿತ್ರರಂಗದಲ್ಲೂ ಇದು ಸಹಾಯಕವಾಗಲಿದೆ ಎಂದು ಶಾರುಕ್ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com