ವಿಶ್ವ ಮಹಿಳಾ ದಿನದಂದು ಸಿನಿಮಾ ಸ್ಟಾರ್ಸ್ ಪತ್ನಿಯರ ಬಗ್ಗೆ ಒಂದಿಷ್ಟು ಮಾಹಿತಿ..

ವಿಶ್ವ ಮಹಿಳಾ ದಿನದಂದು ಬಾಲಿವುಡ್ ಸ್ಟಾರ್ಸ್ ಪತ್ನಿಯರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಬಾಲಿವುಡ್ ನ ಕೆಲ ನಟರ ಪತ್ನಿಯರು ಕೇವಲ ಸ್ಟಾರ್ಸ್ ಪತ್ನಿಯರಾಗಿ ಗುರುತಿಸಲ್ಪಡುವುದಿಲ್ಲ. ತಮ್ಮದೇ ಬ್ಯುಸಿನೆಸ್ ಶುರು ಮಾಡಿ, ಅದ್ರಲ್ಲಿ ಹೆಸ್ರು ಮಾಡಿದವರ ಸಂಖ್ಯೆ ಸಾಕಷ್ಟಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್. ನಟನೆ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಕದ್ದವರು ರಜನಿಕಾಂತ್. ಅವ್ರ ಪತ್ನಿ ಲತಾ ತಮ್ಮ ವೃತ್ತಿ ಜೀವನದಲ್ಲಿ ತುಂಬಾ ಬ್ಯುಸಿಯಾಗಿರ್ತಾರೆ. ಲತಾ, ಮಕ್ಕಳ ಶಿಕ್ಷಣಕ್ಕಾಗಿ ದಿ ಆಶ್ರಮ ಹೆಸರಿನ ಶಾಲೆಯೊಂದನ್ನು ನಡೆಸುತ್ತಿದ್ದಾರೆ.

ಶಾರುಕ್ ಖಾನ್ ಪತ್ನಿ ಗೌರಿ ಖಾನ್ ಎಲ್ಲರಿಗೂ ಗೊತ್ತು. ಗೌರಿ ಇಂಟೀರಿಯರ್ ಡಿಸೈನ್ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಬಾಲಿವುಡ್ ನ ಅನೇಕ ಕಲಾವಿದರ ಮನೆಯೊಳಗಿನ ವಿನ್ಯಾಸವನ್ನು ಗೌರಿ ಮಾಡಿದ್ದಾರೆ.

ಅಮೀರ್ ಖಾನ್ ಪತ್ನಿ ಕಿರಣ್ ರಾವ್, ಚಿತ್ರೋದ್ಯಮದಲ್ಲಿಯೇ ಹೆಸರು ಮಾಡಿದ್ದಾರೆ. ಧೋಬಿ ಘಾಟ್ ಚಿತ್ರದ ನಿರ್ದೇಶನ ಮಾಡಿರುವ ಕಿರಣ್, ಚಿತ್ರಕಥೆ ಹೊಣೆಯನ್ನು ಹೊತ್ತಿದ್ದರು. ಮುಂಬೈ ಚಲನಚಿತ್ರೋದ್ಯಮದ ಅಧ್ಯಕ್ಷರಾಗಿ 2015 ರಲ್ಲಿ ಕಿರಣ್ ಆಯ್ಕೆಯಾಗಿದ್ದರು.

ನಟ ಅಕ್ಷಯ್ ಕುಮಾರ್ ಪತ್ನಿ ಹಾಗೂ ನಟಿ ಟ್ವಿಂಕಲ್ ಖನ್ನಾ, ಮದುವೆಯಾದ್ಮೇಲೆ ಸುಮ್ಮನೆ ಕುಳಿತಿಲ್ಲ. ಇಂಟಿರಿಯರ್ ಕ್ಷೇತ್ರದಲ್ಲಿ ಟ್ವಿಂಕಲ್ ಕೆಲಸ ಮಾಡ್ತಿದ್ದಾರೆ. ಕಾಲಂ ರೈಟರ್ ಆಗಿರುವ ಟ್ವಿಂಕಲ್ ಈಗಾಗಲೇ ಮೂರು ಪುಸ್ತಕ ಬರೆದಿದ್ದಾರೆ.

ಜಾನ್ ಅಬ್ರಹ್ರಾಂ ಪತ್ನಿ ಪ್ರಿಯಾ, ಬಣ್ಣದ ಲೋಕದಿಂದ ದೂರವಿದ್ದಾರೆ. ಆದ್ರೆ ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಪ್ರಿಯಾ, ಎನ್ನಾರೈ ಫೈನಾನ್ಷಿಯಲ್ ಅನಲಿಸ್ಟ್ ಮತ್ತು ಇನ್ವೆಸ್ಟ್ಮೆಂಟ್ ಬ್ಯಾಂಕರ್ ಆಗಿ ಕೆಲಸ ಮಾಡ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com