ರಫೇಲ್ ಒಪ್ಪಂದದ ಬಗ್ಗೆ ಮಾತನಾಡಿದ ಬಾಲಿವುಡ್ ನಟ ಸಿದ್ದಾರ್ಥ್ : ಮೋದಿ ವಿರುದ್ಧ ಟೀಕೆ

ದೇಶದ ಕೆಲ ಸೆಲೆಬ್ರಿಟಿಗಳು ದೇಶದ ರಾಜಕೀಯ ಹಾಗೂ ಇನ್ನಿತರೆ ವಿಷಯದಲ್ಲಾಗುವ ಆಗು ಹೋಗುಗಳ ಬಗ್ಗೆ ಧ್ವನಿ ಎತ್ತುವುದು ಸಹಜ. ಇದೀಗ ಬಾಲಿವುಡ್ ನಟ ಸಿದ್ದಾರ್ಥ್, ರಫೇಲ್ ಒಪ್ಪಂದದ ಬಗ್ಗೆ ಮಾತನಾಡಿರುವುದು ಇದೀಗ ವೈರಲ್ ಆಗಿದೆ.

ಪುಲ್ವಾಮಾ ದಾಳಿ ಬಳಿಕ ಉಗ್ರರ ದಾಳಿಯನ್ನು ರಾಜಕೀಯಗೊಳಿಸಬಾರದು ಎನ್ನುವ ಮೂಲಕ ಪ್ರಧಾನಿ‌ ಮೋದಿಯವರನ್ನು ಟೀಕಿಸಿದ್ದ ಸಿದ್ದಾರ್ಥ್ ಇದೀಗ ರಫೇಲ್ ಒಪ್ಪಂದದ ಬಗ್ಗೆಯೂ ಧ್ವನಿ‌ ಎತ್ತಿದ್ದಾರೆ.

ಶಾಲೆಗಳಲ್ಲಿ ನೀಡುವ ಹೋಮ್‌ ವರ್ಕ್‌ ಉದಾಹರಣೆಯಾಗಿ ನೀಡಿರುವ ಸಿದ್ದಾರ್ಥ್, ಹೋಂ ವರ್ಕ್ ಮಾಡದೇ ಇದ್ದಾಗ, ಶಿಕ್ಷಕರು ರೂಲರ್ ತೆಗೆದುಕೊಂಡ ವೇಳೆ ಹೋಂ ವರ್ಕ್ ಕಳೆದು ಹೋದ ಕಾರಣವಿರುತ್ತಿತ್ತು. ಅದೇ ರೀತಿ ರಫೇಲ್ ಬಗ್ಗೆ ಸುಪ್ರೀಂಕೋರ್ಟ್ ಕೇಳಿದಾಗ, ಮಾಹಿತಿ ಕಳುವಾಗಿದೆ ಎಂದು ಕೇಂದ್ರ ಹೇಳುತ್ತಿದೆ ಎಂದು ಟೀಕಿಸಿದ್ದಾರೆ.

ಸಿದ್ದಾರ್ಥ್ ಅವರ ಈ ಟ್ವೀಟ್ ಕಾಂಗ್ರೆಸ್ ನಾಯಕರಲ್ಲಿ ಹೊಸ ಉತ್ಸಾಹ ಮೂಡಿಸಿದ್ದರೆ, ಇತ್ತ ಬಿಜೆಪಿಯವರಿಗೆ ಇರುಸುಮುರುಸನ್ನುಂಟು ಮಾಡಿದೆ.

Leave a Reply

Your email address will not be published.