‘ಈ ಮನಸ್ಸು..’ ಕದ್ದ ಹಾಡು : ಬಿಗ್ ಬಾಸ್ ಶ್ರುತಿ ಪ್ರಕಾಶ್ ಅಭಿನಯದ ‘ಲಂಡನ್ ನಲ್ಲಿ ಲಂಬೋದರ’ ತೆರೆಗೆ ಸಜ್ಜು

ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಅಭಿನಯದ ಚೊಚ್ಚಲ ಸಿನಿಮಾ ‘ಲಂಡನ್ ನಲ್ಲಿ ಲಂಬೋದರ’ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಕುತೂಹಲ ಮೂಡಿಸಿರುವ ಈ ಸಿನಿಮಾ ಇದೀಗ ಶ್ರುತಿ ಪ್ರಕಾಶ್ ಹಾಡಿರುವ ಹಾಡಿನ ಮೂಲಕ ಗಮನ ಸೆಳೆಯುತ್ತಿದೆ. ಬಿಗ್ ಬಾಸ್ ನಲ್ಲಿ ಉತ್ತಮವಾಗಿ ಆಟವಾಡಿ ಜನರ ಮನಸ್ಸು ಗೆದ್ದಿದ್ದ ಶ್ರುತಿ ಮೂಲತಃ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ಮುಂಬೈನಲ್ಲಿ ಕೆಲವು ಆಲ್ಬಂಗಳಿಗೆ ಧ್ವನಿಯಾಗಿದ್ದ ಶ್ರುತಿ ಈಗ ತಮ್ಮದೇ ಸಿನಿಮಾದಲ್ಲಿ ಹಾಡಿದ್ದಾರೆ. ಈ ಹಾಡು ರಿಲೀಸ್ ಆಗಿದ್ದು ಯುವರಸಿಕರ ಮನದಲ್ಲಿ ಕಚಗುಳಿಯಿಡುತ್ತಿದೆ.

‘ಈ ಮನಸೆ…..’ ಎಂಬ ರೋಮ್ಯಾಂಟಿಕ್ ಸಾಲುಗಳಿಗೆ ಶ್ರುತಿ ಪ್ರಕಾಶ್ ಮತ್ತು ದೀಪಕ್ ದೊಡ್ಡೇರಾ ಧ್ವನಿಯಾಗಿದ್ದಾರೆ. ಪ್ರಣಾವ್ ಅಯ್ಯಂಗರ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು ಜೊತೆಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ.

ಮಾರ್ಚ್ 2 ರಂದು ತೆರೆಕಂಡಿದ್ದ ಈ ಹಾಡು ಯೂಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನುಳಿದಂತೆ ರಾಜ್ ಸೂರ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಲಂಡನ್ ಸ್ಕ್ರೀನ್ಸ್ ಸಂಸ್ಥೆಯಡಿ ಲಂಡನ್​ನಲ್ಲಿ ಅನಿವಾಸಿ ಭಾರತೀಯ ಸ್ನೇಹಿತರೆಲ್ಲ ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ.

Leave a Reply

Your email address will not be published.