ಸಾನಿಯಾ ಮಿರ್ಜಾ ಕುಟುಂಬದಲ್ಲಿ ಮತ್ತೊಂದು ಸಿಹಿ ಸುದ್ದಿ : ವಿಚ್ಛೇದನ ಪಡೆದ ಸಹೋದರಿ ಮದುವೆ

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪಾಕಿಸ್ತಾನದ ಕ್ರಿಕೆಟಿಗ ಶೋಯಬ್ ಮಲಿಕ್ ಅವರ ಕೈ ಹಿಡಿದಿದ್ದು, ಕೆಲ ದಿನಗಳ ಹಿಂದಷ್ಟೇ ಸಾನಿಯಾ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸಮಯಕ್ಕೆ ಮತ್ತೊಂದು ವಿಷಯ ಸೇರ್ಪಡೆಯಾಗಿದ್ದು, ಸಾನಿಯಾ ಸಹೋದರಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಪುತ್ರನ ಜೊತೆ ವಿವಾಹವಾಗಲಿದ್ದಾರೆಂದು ಹೇಳಲಾಗಿದೆ.

ಸಾನಿಯಾ ಸಹೋದರಿ 25 ವರ್ಷದ ಆನಮ್ ಮಿರ್ಜಾ ಈ ಮೊದಲು ಹೈದರಾಬಾದ್ ಮೂಲದ ಉದ್ಯಮಿಯನ್ನು ವಿವಾಹವಾಗಿದ್ದು, ಕಳೆದ ವರ್ಷ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದೀಗ ಅಜರುದ್ದೀನ್ ಪುತ್ರ 28 ವರ್ಷದ ಅಸಾದ್ ಜೊತೆ ಆನಮ್ ಸುತ್ತಾಡುತ್ತಿದ್ದು, ಶೀಘ್ರದಲ್ಲೇ ಇವರಿಬ್ಬರು ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ಇದಕ್ಕೆ ಪುಷ್ಟಿ ನೀಡುವಂತೆ ಆನಮ್ ಮಿರ್ಜಾ ತಮ್ಮ ಸಾಮಾಜಿಕ ಜಾಲತಾಣ ಖಾತೆ ಇನ್ಸ್ಟಾಗ್ರಾಮ್ ನಲ್ಲಿ ಅಸಾದ್ ಜೊತೆಗಿರುವ ಫೋಟೋಗಳನ್ನು ಹಾಕಿಕೊಂಡಿದ್ದು, ಒಂದು ಫೋಟೋದಲ್ಲಿ ಸಾನಿಯಾ ಕೂಡಾ ಕಾಣಿಸಿಕೊಂಡಿದ್ದಾರೆ. ವಿವಾಹವಾಗಲು ತೀರ್ಮಾನಿಸಿರುವ ಆನಮ್ ಹಾಗೂ ಅಸಾದ್ ಈಗಾಗಲೇ ದುಬೈನಲ್ಲಿ ಶಾಪಿಂಗ್ ಕೂಡಾ ಮಾಡಿದ್ದಾರೆಂದು ಹೇಳಲಾಗಿದೆ.

Leave a Reply

Your email address will not be published.